ಬೆಂಗಳೂರು: ಬಿಜೆಪಿ (BJP) ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧ ಇದೆ. ನನ್ನ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು (Sharana Gowda Kandakur) ಜೆಡಿಎಸ್ ವರಿಷ್ಠರ ವಿರುದ್ಧ ಕಿಡಿಕಾರಿದ್ದಾರೆ.
ಹಾಸನದಲ್ಲಿ ನಡೆದ ಜೆಡಿಎಸ್ ಸಭೆಗೆ (JDS Meeting) ಗೈರಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಭೆಗೆ ಹೋಗದೇ ಇರಲು ಪಕ್ಷದ ವಿರುದ್ದ ಸಮಾಧಾನ ಅಸಮಾಧಾನ ಪ್ರಶ್ನೆ ಅಲ್ಲ. ಅನೇಕ ದಿನಗಳಿಂದ ಸಮಿತಿ ಸಭೆಗೆ ಹೋಗಿರಲಿಲ್ಲ. ಸಮಿತಿ ಸಭೆ ಇವತ್ತು ಇದೆ ಅದಕ್ಕೆ ಸಭೆಗೆ ಹೋಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್ ಆಯ್ತು ಸರ್ಕಾರಿ ಅಧಿಕಾರಿಯ ಟೇಬಲ್ ಬೋರ್ಡ್
ವರಿಷ್ಠರು ಸಭೆಗೆ ಆಹ್ವಾನ ಮಾಡಿದ್ದರು. ನಾನು ಸಭೆಗೆ ಬರುವುದಿಲ್ಲ ಎಂದು ಹೇಳಿಲ್ಲ. ಸಮಿತಿ ಸಭೆ ಇರುವುದರಿಂದ ನಾನು ಹೋಗಲಿಲ್ಲ ಅಷ್ಟೇ ಎಂದು ತಿಳಿಸಿದರು. ಮೈತ್ರಿಗೆ ನನ್ನ ಅಸಮಾಧಾನ ಇದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್‌ನಿಂದ ದೂರ ಆಗುತ್ತಿಲ್ಲ. ಅಸಮಾಧಾನ ಇದ್ದರೂ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ಮತ್ತು ನನ್ನದು ರಾಜಕೀಯ ಮೀರಿದ ಸಂಬಂಧ. ಆದರೂ ಅವರ ಜೊತೆ ಹಲವು ರಾಜಕೀಯ ವಿಚಾರ ಚರ್ಚೆ ಮಾಡಿದ್ದೇನೆ. ಬಿಜೆಪಿ ಜೊತೆ ಮೈತ್ರಿಗೆ ವಿರೋಧ ಇದ್ದು, ಮೊದಲ ಹೇಳಿಕೆಗೆ ನಾನು ಈಗಲೂ ಬದ್ಧ. ಮೈತ್ರಿ ಬೇಡ ಎಂದು ನಾನು ಮೊದಲೇ ಹೇಳಿದ್ದೇನೆ. ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು
ಕಂದಕೂರು ಕಾಂಗ್ರೆಸ್ ಸೇರ್ಪಡೆ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆ ಎನ್ನುವುದಕ್ಕಿಂತ ಅವರಿಗೆ 135 ಸ್ಥಾನ ಇದೆ. ನನ್ನನ್ನು ತೆಗೆದುಕೊಂಡು ಅವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ, ಡಿಸಿಎಂ, ಸಚಿವರ ಜೊತೆ ಮಾತಾಡಿದ್ದೇನೆ. ಕಾಂಗ್ರೆಸ್ ನಿಂದ ಪಕ್ಷಕ್ಕೆ ಬನ್ನಿ ಅಂತ ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ.ಕಾಂಗ್ರೆಸ್ ಗೆ 135 ಸ್ಥಾನ ಇದೆ. ಜೆಡಿಎಸ್ ನ 2-3 ಶಾಸಕರು ಅವರಿಗೆ ಅವಶ್ಯಕತೆ ಇಲ್ಲ. ನನ್ನ ಅಸಮಾಧಾನ ಪಕ್ಷದ ವೇದಿಕೆಯಲ್ಲಿ ಹೇಳುತ್ತೇನೆ ಎಂದರು.