ಬೆಳಗಾವಿ: ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದು ನಗರಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಎದುರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ ಘಟನೆ ನಡೆಯಿತು.
- Advertisement 2
ಶರದ್ ಪವಾರ್ ಎರಡು ದಿನಗಳ ಕಾಲ ನಗರದ ಪ್ರವಾಸ ಕೈಗೊಂಡಿದ್ದು ಇಂದು ಬೆಳಗಾವಿಯ ಮರಾಠಾ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರದ್ ಪವಾರ್ ಭಾಷಣ ಆರಂಭವಾಗುತ್ತಿದ್ದಂತೆ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಲವ್ವರ್ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್ಮ್ಯಾನ್
- Advertisement 3
- Advertisement 4
ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗುವ ವೇಳೆ ಶರದ್ ಪವಾರ್ ಸುಮ್ಮನೆ ನಿಂತರು. ನಾಡದ್ರೋಹಿಗಳ ಹಾರಾಟ ಮುಗಿದ ನಂತರ ಭಾಷಣ ಪ್ರಾರಂಭ ಮಾಡಬಹುದಾ ಎಂದು ಎಂಇಎಸ್ ಪುಂಡರನ್ನು ಶರದ್ ಪವಾರ್ ಕೇಳಿ, ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡ್ತಿನಿ ಅಂತಾ ಹೇಳಿದರು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿ, ಕೃಷ್ಣ ಮೊಪಸೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ?