Bengaluru CityCinemaDistrictsKarnatakaLatestLeading NewsMain PostSandalwood

ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ನಿರ್ಮಾಣ ಮಾಡಿದ್ದ ಕಿಶೋರ್ ಪತ್ತೆಕೊಂಡ ಇದೀಗ ಡಾ.ರಾಜ್ ಕುಟುಂಬದ ಜತೆಯೇ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಪುತ್ರ ಧಿರೇನ್ ರಾಮ್ ಕುಮಾರ್ ಅವರಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಧೀರೇನ್ ಅವರ ಹುಟ್ಟು ಹಬ್ಬ. ಈ ದಿನದಂದು ಕಿಶೋರ್ ಪ್ರೊಡಕ್ಷನ್‌ ಲಾಂಛನದಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾದ ಘೋಷಣೆ ಮಾಡಲಿದ್ದಾರೆ.

Dheeren ramkumar,

ಈಗಾಗಲೇ ಧೀರೇನ್ ‘ಶಿವ 143’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಂತರ ಪತ್ತೆಕೊಂಡ ನಿರ್ಮಾಣದ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ಧನಂಜಯ್ ಅವರಿಗಾಗಿ ಬಡವ ರಾಸ್ಕಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶಂಕರ್ ಗುರು ಈ ಸಿನಿಮಾದ ನಿರ್ದೇಶಕ. ಧೀರೆನ್‌ಗಾಗಿ ಹೊಸ ಬಗೆಯ ಕಥೆಯನ್ನು ಹೆಣೆದಿದ್ದಾರಂತೆ.  ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಧೀರೇನ್ ಹುಟ್ಟು ಹಬ್ಬಕ್ಕಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಈ ಸಿನಿಮಾದ ಇತರ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

ಕಿಶೋರ್ ಪತ್ತೆಕೊಂಡ ಡಾ.ರಾಜ್ ಕುಟುಂಬದ ಸಿನಿಮಾದೊಂದಿಗೆ ಚಿತ್ರೋದ್ಯಮಕ್ಕೆ ಕಾಲಿಟ್ಟವರು, ಆ ನಂಟಿನಿಂದಾಗಿ ಎರಡನೇ ಸಿನಿಮಾವನ್ನು ಅದೇ ಕುಟುಂಬದೊಂದಿಗೆ ಮುಂದುವರೆಸಿದ್ದು ವಿಶೇಷ. ಇದನ್ನೂ ಓದಿ: ಒಂದೇ ಪ್ರಾಜೆಕ್ಟ್‌ನಲ್ಲಿ ವಿಕ್ಕಿ ಕೌಶಲ್- ಪೂಜಾ ಹೆಗ್ಡೆ?

Leave a Reply

Your email address will not be published.

Back to top button