ರಾಯಚೂರು: ಚುನಾವಣೆ ಮುಂದಿಟ್ಟುಕೊಂಡು ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಉತ್ಸಾಹದಲ್ಲಿ ಕಾಂಗ್ರೆಸ್‍ನವರು ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಮಾತನಾಡುತ್ತಿದ್ದಾರೆ. ಅಧಿಕಾರದ ಆಸೆಗೆ ಈ ರೀತಿ ಮಾತನಾಡುವುದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಶೋಭೆ ತರುವಂತದಲ್ಲ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‍ನಿಂದ ಗೆದ್ದ ಶಾಸಕರು, ಸಚಿವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್‍ನಿಂದ ಬಂದವರು ಮತ್ತೆ ಕಾಂಗ್ರೆಸ್‍ಗೆ ಹೋಗುತ್ತಾರೆ ಎನ್ನವುದು ಕೇವಲ ರಾಜಕೀಯ ಹೇಳಿಕೆ ಅದಕ್ಕೆ ಅರ್ಥವಿಲ್ಲ ಎಂದರು.
Advertisement
Advertisement
ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಆರಂಭವಾಗಿಲ್ಲ. ನಮ್ಮ ಹಿರಿಯರು ಅನುಭವಿಗಳಿದ್ದಾರೆ. ನಮ್ಮ ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದ ಅವರು, ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿರುವ ರಮೇಶ್ ಜಾರಕಿಹೊಳಿ ಹೇಳಿಕೆ ಸತ್ಯಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಯಾರ ಸಂಪರ್ಕದಲ್ಲೂ ಇಲ್ಲ, ಬಿಜೆಪಿ ಸಂಪರ್ಕದಲ್ಲಿದ್ದೇನೆ: ಎಂಟಿಬಿ ನಾಗರಾಜ್
Advertisement
Advertisement
ನಮ್ಮ ಸರ್ಕಾರ ಬರೋದಕ್ಕೆ ರಮೇಶ ಜಾರಕಿಹೊಳಿಯವರು ಪ್ರಮುಖರು. ತುಂಬಾ ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸಜವಾಗಿಯೇ ಆ ಪಕ್ಷದಲ್ಲಿ ಅವರಿಗೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಅವರು ಹೇಳಿದ ಮಾತು ಸತ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊರೊನಾ ನಿಯಂತ್ರಣದಲ್ಲಿ ಸರ್ಕಾರದಿಂದ ಅತ್ಯುತ್ತಮ ಸಾಧನೆ: ಗೆಹ್ಲೋಟ್
ಕಾಂಗ್ರೆಸ್‍ನಿಂದ ಮಹಾದಾಯಿ ಹಾಗೂ ಕಳಸಾಬಂಡೂರಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಅವರು ಮೊದಲು ಸೋನಿಯಾ ಗಾಂಧಿ ಅವರ ಅಭಿಪ್ರಾಯ ತಿಳಿದುಕೊಂಡು ಮಾತನಾಡಲಿ. ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ನೀರು ಕೊಡಲ್ಲ ಎಂದು ಹೇಳಿದ್ದಾರೆ. ಕಳಸಾಬಂಡೂರಿ ಹಾಗೂ ಮಹಾದಾಯಿಗೆ ಒಂದು ಹನಿ ನೀರು ಕೊಡಲ್ಲ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅವರು ಈಗಾಗಲೇ ಮೇಕೆದಾಟು ಪಾದಯಾತ್ರೆ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದಲ್ಲೇ ಪಾದಯಾತ್ರೆಗೆ ಮುಂದಾದಾಗ ಕೋರ್ಟ್ ಛೀಮಾರಿ ಹಾಕಿದೆ. ಕೇವಲ ರಾಜಕಾರಣಕ್ಕೋಸ್ಕರ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುತ್ತಾರೆ ಎಂದು ಟೀಕಿಸಿದರು.