ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟಿನ ಎಲ್ಲಾ ಮಾದರಿಗಳಲ್ಲಿಯೂ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅವರಿಗಿಂತ ಉತ್ತಮ ಆಟಗಾರ ಎಂದು ಆಸೀಸ್ ಮಾಜಿ ದಿಗ್ಗಜ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದ ಸ್ಮಿತ್ ಕುರಿತು ವಾರ್ನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಕೇವಲ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್ ಅಷ್ಟೇ. ಆದರೆ ಕೊಹ್ಲಿ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ ಉತ್ತಮ ರನ್ ಗಳಿಸಿದ್ದಾರೆ ಎಂದು ವಾರ್ನ್ ಹೇಳಿದ್ದಾರೆ. ಇದನ್ನು ಓದಿ: ರೂಮಿನ ಕಿಟಕಿ ತೆರೆದು ಸೆಕ್ಸ್ ಪಾರ್ಟಿ – ಪ್ರೇಯಸಿ, ವೇಶ್ಯೆಯರ ಜೊತೆ ವಾರ್ನ್ ಸಲ್ಲಾಪ
Advertisement
Steve Smith is now the highest run-getter in 2019. Here's the monthly break-up!
Jan: 0
Feb: 0
Mar: 0
Apr: 0
May: 0
Jun: 0
Jul: 0
Aug: 378 runs in 3 innings
Sep: 211 runs in 1 innings ???? pic.twitter.com/uZbNcU2NPq
— ICC (@ICC) September 6, 2019
Advertisement
ವಿಶ್ವ ಕ್ರಿಕೆಟಿನಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಕ್ರಿಕೆಟಿನ ಮೂರು ಮಾದರಿಗಳಲ್ಲಿ ಈಗಾಗಲೇ ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಸ್ಮಿತ್ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್. ಕೊಹ್ಲಿರನ್ನು ಲೆಜೆಂಡ್ ಕ್ರಿಕೆಟ್ ಎಂದು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
Advertisement
ಇದೇ ವೇಳೆ ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆ ಎಂಬ ವಿಶ್ವಾಸ ಇದೆ. ಸಿಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಕೊಹ್ಲಿಗಿಂತ ಉತ್ತಮ ಆಟಗಾರರನ್ನು ನೋಡಿಲ್ಲ. ನನಗೆ ವಿವಿ ರಿಚರ್ಡ್ ಸನ್ ಅತ್ಯುತ್ತಮ ಆಟಗಾರರಾಗಿದ್ದು, ಆ ಬಳಿಕ ತಾವು ಕಂಡ ಅತ್ಯುತ್ತಮ ಆಟಗಾರ ಕೊಹ್ಲಿ. ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಹ್ಲಿ ನಿವೃತ್ತಿ ಹೇಳುವ ವೇಳೆಗೆ ವಿಶ್ವದಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಪಡೆದಿರುತ್ತಾರೆ ಎಂದು ವಾರ್ನ್ ಭವಿಷ್ಯ ನೀಡಿದಿದ್ದಾರೆ. ಇದನ್ನು ಓದಿ: ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು
Advertisement
Steve Smith brings up a superb double hundred ????
It's his third in Test cricket and his third against England. His Test average is now above 65 ????
Simply incredible ???? #Ashes pic.twitter.com/2em9HHM9SP
— ICC (@ICC) September 5, 2019
ಸದ್ಯ ನಡೆಯುತ್ತಿರುವ ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡಿರುವ ಸ್ಮಿತ್, 147.25ರ ಸರಾಸರಿಯಲ್ಲಿ 589 ರನ್ ಸಿಡಿಸಿದ್ದಾರೆ. ಗುರುವಾರವಷ್ಟೇ ದ್ವಿಶತಕ ಕೂಡ ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಶ್ರೇಯಾಂಕಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು. ಇದುವರೆಗೂ 79 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 135 ಇನ್ನಿಂಗ್ಸ್ ಗಳಿಂದ 53.14 ಸರಾಸರಿಯಲ್ಲಿ 25 ಶತಕ, 22 ಅರ್ಧ ಶತಕಗಳೊಂದಿಗೆ 6,749 ರನ್ ಗಳಿಸಿದ್ದಾರೆ. 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮಿತ್ 121 ಇನ್ನಿಂಗ್ಸ್ ಗಳಿಂದ 64.64ರ ಸರಾಸರಿಯಲ್ಲಿ 26 ಶತಕ, 25 ಅರ್ಧ ಶತಕಗಳೊಂದಿಗೆ 6,788 ರನ್ ಗಳಿಸಿದ್ದಾರೆ.
Steve Smith in #Ashes 2019:
???? 3 Tests
???? 479 runs
???? 3 centuries
???? 1 fifty
???? 159.66 average ????
FOLLOW LIVE ▶️ https://t.co/zrb0K55IBc pic.twitter.com/6OiqRr94WD
— ICC (@ICC) September 5, 2019