ದಾವಣಗೆರೆ: ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಅವನೊಬ್ಬ ಮಂಗ, ಅವನಿಗೇನು ಗೊತ್ತು ಅಂತ ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾನು ಬೆಳೆದು ಬಂದಿರೋದು ಅವನಿಗೇನು ಗೊತ್ತು, ಅವನು ಇನ್ನು ಸಣ್ಣ ಹುಡುಗ. ನಾನು ಎಲ್ಲೂ ಎಂ.ಬಿ ಪಾಟೀಲ್ ಹೆಸರು ಬಳಸಿಲ್ಲ. ಅವನ ಬಗ್ಗೆ ಏನಾದ್ರು ಮಾತನಾಡಿದ್ನಾ? ಜನ ಮಾತಾಡ್ತಾ ಇರೋದು, ನಡಿದಿರೋದನ್ನ ಹೇಳಿದ್ದೇನೆ. ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ
ವೀರಶೈವ ಲಿಂಗಾಯತ ವಿಚಾರದಲ್ಲಿ 50-60 ವರ್ಷ ಮಲಗಿದ್ನಾ ಅಂತ ಪ್ರಶ್ನಿಸಿದ ಬಳಿಕ ಈ ಕುರಿತು ಏನು ಮಾತನಾಡಲ್ಲ, ನಾವು ನಾವೇ ಕೂತು ಈ ವಿಚಾರ ಬಗೆಹರಿಸಿಕೊಳ್ಳುತ್ತೇವೆ ಎಂದರು. ಹಾಗೆಯೇ ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ, ಅವನನ್ನು ಉದ್ದಾರ ಮಾಡಿದ್ದೇ ನಾನು ಮತ್ತು ಪ್ರಭಾಕರ್ ಕೋರೆ, ಅವನಿಗೇನು ಗೊತ್ತು ಅವನು ಮಂಗ ಎಂದು ಕಿಡಿಕಾರಿದ್ದಾರೆ.
https://www.youtube.com/watch?v=6qGWZkPY2gQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv