– ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಬಾಂಬ್
– ಸಮಯ ಬಂದಾಗ ಆಡಿಯೋ ರಿಲೀಸ್
ಬೆಂಗಳೂರು: ಬಜೆಟ್ ದಿನವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿರುವ ಬಗ್ಗೆ ಆಡಿಯೋ ರಿಲೀಸ್ ಮಾಡಿದ್ದರು. ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ಆಪರೇಷನ್ ಆಡಿಯೋ ಇದೆ ಎಂದು ಶಾಸಕ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಶಾಸಕನ ಪುತ್ರನಿಗೆ ಬಿಎಸ್‍ವೈಯಿಂದ ಮಂತ್ರಿಗಿರಿ ಆಫರ್ – ಆಡಿಯೋದಲ್ಲಿ ಏನಿದೆ?
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ. ಅದನ್ನ ಅವರು ಬಿಡುಗಡೆ ಮಾಡಿಲ್ಲ. ಸಮಯ ಬಂದಾಗ ಬಿಡುಗಡೆ ಮಾಡುತ್ತಾರೆ. ಸಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ, ಐದು ವರ್ಷ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್
ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಜನಪರವಾಗಿದ್ದು, ಜಿಲ್ಲೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಜನಪರ ಹಾಗೂ ರೈತ ಪರವಾದ ಬಜೆಟ್ ಆಗಿದೆ. ಬಿಜೆಪಿಯವರು ಗಲಾಟೆ ಮಾಡುತ್ತಾರೆ ಅಂತ ಅವರಿಗೆ ಬಜೆಟ್ ಬುಕ್ ನೀಡಲಿಲ್ಲ. ಶುಕ್ರವಾರ ಕೂಡ ರಾಜ್ಯಪಾಲರ ಭಾಷಣದ ವೇಳೆ ಗಲಾಟೆ ಮಾಡುತ್ತಿದ್ದರು. ಈ ಕಾರಣಕ್ಕೆ ಬಜೆಟ್ ಪುಸ್ತಕ ನೀಡಿರಲಿಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಸದ್ಯದಲ್ಲೇ ಸಿದ್ದರಾಮಯ್ಯ ಅವರು ಮತ್ತೊಂದು ಬಾಂಬ್ ಸಿಡಿಸುತ್ತಾರಾ? ಬಿಎಸ್‍ವೈ ಆ್ಯಂಡ್ ಬಿಜೆಪಿ ತಂಡಕ್ಕೆ ಶಾಕ್ ಕೊಡುತ್ತಾರಾ? ಎಂಬ ಪ್ರಶ್ನೆ ಮೂಡಿದ್ದು, ಒಂದು ವೇಳೆ ಸಿದ್ದರಾಮಯ್ಯ ಬಳಿ ಇರುವ ಆಡಿಯೋದಲ್ಲಿ ರಿಲೀಸ್ ಆದರೆ ಅದರಲ್ಲಿ ಏನಿದೆ ಎಂಬ ಕುತೂಹಲ ಮೂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv