ದಾವಣಗೆರೆ: ಸಿಎಂ ಸ್ಥಾನದ ಮೇಲೆ ಶಾಮನೂರು ಶಿವಶಂಕರಪ್ಪ ಕಣ್ಣಿಟ್ಟದ್ದಾರೆ. ಕಾಂಗ್ರೆಸ್‍ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಬಳಿಕ ಸಿಎಂ ರೇಸ್‍ನಲ್ಲಿ ನಾನು ಇದ್ದೇನೆ ಎಂದು ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತಗಟ್ಟೆ ಮಾಡಲಾಗಿದ್ದು, ಮತದಾನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇ ಸಿಎಂ ಆಗುತ್ತೇನೆ. ಎಂಎಲ್‍ಎ ಚುನಾವಣೆಯಲ್ಲಿ ನಾನು ಪ್ರಬಲವಾಗಿ ಸಿಎಂ ಸ್ಥಾನ ಕೇಳುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಇಲ್ಲ ಗೂಂಡಾಗಳ ರಾಜ್ಯದಲ್ಲಿದ್ದೀವಾ? ಈಶ್ವರ ಖಂಡ್ರೆ
ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಯಾರ ಬೆಂಬಲವೂ ಬೇಡ, ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತದೆ. ಎಲ್ಲಾ ಕಡೇ ಕಾಂಗ್ರೆಸ್‍ಗೆ ಒಳ್ಳೆಯ ಗಾಳಿ ಇದೆ, ಎಂಎಲ್‍ಸಿ ಚುನಾವಣೆ ಗೆಲ್ಲುತ್ತೇವೆ, ಮುಂದೆ ಎಂಎಲ್‍ಎ ಚುನಾವಣೆಯನ್ನು ಗೆಲ್ಲುತ್ತೇವೆ, 140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಅಂದು ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುತ್ತೇನೆ. ಡಿಕೆಶಿ, ಸಿದ್ದರಾಮಯ್ಯರಂತೆ ನಾನು ಸಿಎಂ ಸ್ಥಾನ ಕೇಳೆ ಕೇಳುತ್ತೇನೆ, ಕೊನೆಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಕಾರು ಅಡ್ಡಗಟ್ಟಿ ಅಪಾಯ ಮಾಡುವ ಸಂಚು ಹೂಡಿದ್ದರು: ಈಶ್ವರ್ ಖಂಡ್ರೆ ಆರೋಪ