ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಶಮಂತ್ ಬ್ರೋ ಗೌಡ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಬ್ರೋ ಗೌಡ ಆವರ ಕಾರನ್ನು ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ರೈಡ್ ಮಾಡಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
- Advertisement 2-
ಶಮಂತ್ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಈ ಕಾರನ್ನು ಸುದೀಪ್ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು. ಅದು ಈಗ ಈಡೇರಿದೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!
- Advertisement 3-
View this post on Instagram
- Advertisement 4-
ಶಮಂತ್ ಅವರು ತಮ್ಮ ಬಿಎಂಡಬ್ಲ್ಯೂ ಕಾರನ್ನು ಸುದೀಪ್ ಮನೆಗೆ ತಂದಿದ್ದಾರೆ. ಸುದೀಪ್ ಅವರು ಕಾರನ್ನು ಓಡಿಸಿದ್ದಾರೆ. ಅಲ್ಲದೆ ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಕೂಡ ಹಾಕಿದ್ದಾರೆ. ಸದ್ಯ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸುದೀಪ್ ಆಶೀರ್ವಾದ ಪಡೆದ ಶಮಂತ್ ಸಾಕಷ್ಟು ಖುಷಿಪಟ್ಟಿದ್ದಾರೆ. ಕಿಚ್ಚ ಸುದೀಪ್‍ಗೆ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಯಾವಾಗಲೂ ವಿಶೇಷ ಗೌರವ ಇದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಯಾಗಿದೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ
ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕೊರೊನಾ ಸೋಂಕು ಅಬ್ಬರ ಕಡಿಮೆ ಆದರೆ ಮುಂದಿನ ತಿಂಗಳು ಚಿತ್ರ ರಿಲೀಸ್ ಆಗಲಿದೆ. ಇದರ ಮಧ್ಯೆ ಬಿಡುವು ಮಾಡಿಕೊಂಡು ಶಮಂತ್ ಬ್ರೋ ಗೌಡ ಕಾರನ್ನು ಅವರು ಓಡಿಸಿದ್ದಾರೆ. ಈ ವೀಡಿಯೋವನ್ನು ಬ್ರೋ ಗೌಡ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್‍ಗೆ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಯಾವಾಗಲೂ ವಿಶೇಷ ಗೌರವ ಇದೆ.