ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿ ಹಿನ್ನೆಲೆ ಉಚಿತ ಪ್ರಯಾಣದ ಅವಕಾಶ ಇರುವುದರಿಂದ ರಾಜ್ಯಾದ್ಯಂತ ಇದರ ಲಾಭವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಅಜ್ಜಿ (Old Woman) ಒಂದು ಇಡೀ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಅನ್ನೇ ಬುಕ್ ಮಾಡಲು ಬಂದಿದ್ದಾರೆ.
ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ವಿಚಾರಣಾ ಕೌಂಟರ್‌ಗೆ ಬಂದು ಇಡೀ ಬಸ್‌ನ 48 ಸೀಟುಗಳನ್ನು ರಿಸರ್ವ್ ಮಾಡುವ ಬಗ್ಗೆ ವಿಚಾರಿಸಿದ್ದಾರೆ. ಯಾವ್ಯಾವ ಮಾರ್ಗಗಳಿಗೆ ಎಷ್ಟು ಗಂಟೆಗೆ ಬಸ್‌ಗಳ ವ್ಯವಸ್ಥೆಯಿದೆ ಎಂದು ಅಜ್ಜಿ ಪೇಪರ್‌ನಲ್ಲಿ ಬರೆದುಕೊಂಡು ಹೋಗಿದ್ದಾರೆ.
- Advertisement
4-5 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಪ್ಲ್ಯಾನ್ ಮಾಡಿರುವ ಅಜ್ಜಿ ಸುಮಾರು 20 ಜನರ ತಂಡವನ್ನು ಮಾಡಿಕೊಂಡಿದ್ದಾರೆ. ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಇನ್ನೂ 20 ಜನರನ್ನು ಒಟ್ಟುಗೂಡಿಸಿ ಒಟ್ಟು 48 ಜನರಿಗೆ ಸೀಟ್ ರಿಸರ್ವ್ ಮಾಡಲು ಅಜ್ಜಿ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!
- Advertisement
ಉಚಿತ ಬಸ್‌ಗಳಲ್ಲಿ 20 ರೂ. ನೀಡಿ ಮುಂಗಡವಾಗಿ ಸೀಟ್‌ಗಳನ್ನು ರಿಸರ್ವ್ ಮಾಡಬಹುದು. ಹೀಗಾಗಿ ಅಜ್ಜಿ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಿದ್ದಾರೆ. ಆದರೆ ಒಂದು ಬಸ್‌ನಲ್ಲಿ ಮಹಿಳೆಯರಿಗೆ 50% ಮಾತ್ರವೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಈ ಮೊದಲೇ ತಿಳಿಸಿದೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್