ಬೀದರ್: ಕಾಂಗ್ರೆಸ್ (Congress) ಸರ್ಕಾರದ ಶಕ್ತಿ ಗ್ಯಾರಂಟಿ ಎಫೆಕ್ಟ್‌ನಿಂದಾಗಿ ಸೀಟಿಗಾಗಿ ವಿದ್ಯಾರ್ಥಿ ಮತ್ತು ಕಂಡಕ್ಟರ್ ನಡುವೆ ಜಟಾಪಟಿ ನಡೆದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಜನವಾಡ ಗ್ರಾಮದ ಬಳಿ ನಡೆದಿದೆ.
ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಇಬ್ಬರ ಗಲಾಟೆಯಾಗಿದೆ. ಮಾತಿನ ಚಕಮಕಿ ವೇಳೆ ಕಂಡಕ್ಟರ್ ಧುಳಪ್ಪ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಜಾರ್ಖಂಡ್ ಸಚಿವೆ ಪುತ್ರಿ ಸೇರಿ ನಾಲ್ವರು ದುರ್ಮರಣ
ಬಸ್ ಔರಾದ್‌ನಿಂದ ಬೀದರ್ ಕಡೆ ತೆರಳುತ್ತಿತ್ತು. ಜೊತೆಗೆ ಬಸ್ ಫುಲ್ ರಶ್ ಆಗಿತ್ತು. ಈ ವೇಳೆ ಕಂಡಕ್ಟರ್ ಒಂದು ಸೀಟಿನಲ್ಲಿ ನಾಲ್ಕೈದು ಜನ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ಶುರುವಾಗಿದೆ.
ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಸದ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ವಿದ್ಯಾರ್ಥಿ ಆಗ್ರಹಿಸಿದ್ದಾನೆ.ಇದನ್ನೂ ಓದಿ: ಬೆಟಾಲಿಯನ್ ಮುಹೂರ್ತ: ಟೀಮ್ ಸೇರಿಕೊಂಡ ಪ್ರಮೋದ್ ಶೆಟ್ಟಿ

