ಕೊಪ್ಪಳ: ಜಿಲ್ಲೆಯ ಕೆಎಸ್‌ಆರ್‌ಟಿಸಿ (KSRTC) ಬಸ್‌ವೊಂದರಲ್ಲಿ ಓರ್ವ ಪುರುಷ ಪ್ರಯಾಣಿಕನಿಗೆ ಮಹಿಳಾ ಪ್ರಯಾಣಿಕರು ಸೇರಿ ಥಳಿಸಿದ ಘಟನೆಯೊಂದು ನಡೆದಿದೆ.ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿಗೆ ದೇಣಿಗೆ ಜಾಸ್ತಿ
ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kushtagi) ಮಾರ್ಗ ಮಧ್ಯೆ ಸರ್ಕಾರಿ ಬಸ್‌ನಲ್ಲಿ ಹೋಗುವಾಗ ಗಲಾಟೆಯಾಗಿದೆ. ಬಸ್ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೊರಟಿತ್ತು. ಈ ವೇಳೆ ಬಸ್‌ನಲ್ಲಿದ್ದ ಮಹಿಳೆಯರು ಹಾಗೂ ಓರ್ವ ಪುರುಷನ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ನಡುವೆಯೇ ಮಹಿಳೆಯರು ಪುರುಷನಿಗೆ ಥಳಿಸಿದ್ದು, ಗಲಾಟೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.
ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರ ಜೊತೆ ಪುರುಷ ಅನುಚಿತವಾಗಿ ವರ್ತಿಸಿದ್ದು, ಗಲಾಟೆಗೆ ಕಾರಣ ಎಂದು ಶಂಕಿಸಲಾಗಿದೆ.ಇದನ್ನೂ ಓದಿ: ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ