ಢಾಕಾ: ಬಾಂಗ್ಲಾ (Bangladesh) ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ (Shakib Al Hasan) ಮತ್ತೊಮ್ಮೆ ನೇಮಕಗೊಂಡಿದ್ದಾರೆ. ಈ ಮೂಲಕ ಅವರು 2023ರ ವಿಶ್ವಕಪ್‍ನಲ್ಲಿ (World Cup) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶಕೀಬ್ ಈಗ ಎಲ್ಲಾ ಸ್ವರೂಪದ ಕ್ರಿಕೆಟ್‍ನ ನಾಯಕರಾಗಿದ್ದಾರೆ. ಕಳೆದ ವರ್ಷದಿಂದ ಟೆಸ್ಟ್ ಮತ್ತು ಟಿ20 ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಏಷ್ಯಾಕಪ್‍ನಿಂದ ಹೊರಗುಳಿದ ನಂತರ ಆಗಸ್ಟ್ 3 ರಂದು ಕೆಳಗಿಳಿದಿದ್ದ ತಮೀಮ್ ಇಕ್ಬಾಲ್ ಬದಲಿಗೆ ನಾಯಕ ಸ್ಥಾನವನ್ನು ಪಡೆದಿದ್ದಾರೆ. ಇದನ್ನೂ ಓದಿ: Asia Cup 2023: ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕ್ ಹೆಸರು – ಫೋಟೋ ವೈರಲ್
Advertisement
Advertisement
ಶಕೀಬ್ ಲಂಕಾ ಪ್ರೀಮಿಯರ್ ಲೀಗ್‍ನಿಂದ ಹಿಂದಿರುಗಿದಾಗ ನಾವು ಅವರೊಂದಿಗೆ ಹೆಚ್ಚು ಚರ್ಚಿಸಲಿದ್ದೇವೆ. ಅವರ ಜೊತೆ ಫೊನ್‍ನಲ್ಲಿ ಮಾತನಾಡಲಾಗಿದೆ. ಆದರೆ ಅವರು ಪ್ರಸ್ತುತ ಫ್ರಾಂಚೈಸ್ ಲೀಗ್‍ನಲ್ಲಿ ನಿರತರಾಗಿರುವ ಕಾರಣ ನಾವು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಾದ ಕ್ರಮವಾಗಿದೆ. ಅವರು ಯಾವ ಬಗೆಯ ಕ್ರಿಕೆಟ್‍ನಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದರ ಮಾತನಾಡಲಾಗುತ್ತದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.
Advertisement
ಶಕಿಬ್ ನಾಯಕತ್ವಕ್ಕೆ ಮೊದಲ ಆಯ್ಕೆಯಾಗಿದ್ದಾರೆ. ಆದರೆ ಅವರನ್ನು ನೇಮಿಸುವ ಮೊದಲು ನಾವು ಅವರೊಂದಿಗೆ ಮಾತನಾಡಬೇಕಾಗಿತ್ತು. ಬೇರೆ ಆಟಗಾರರು ಈ ಬಗ್ಗೆ ಬೇರೆ ಅರ್ಥದಲ್ಲಿ ಯೋಚಿಸಬಾರದು ಎಂದಿದ್ದಾರೆ.
Advertisement
2011ರ ವಿಶ್ವಕಪ್‍ನಲ್ಲಿ ನಾಯಕತ್ವ ವಹಿಸಿ ಈ ಬಾರಿಯೂ ನಾಯಕತ್ವ ವಹಿಸಲಿರುವ ಏಕೈಕ ಆಟಗಾರ ಶಕಿಬ್ ಆಗಿದ್ದಾರೆ. ಅವರು ಇದುವರೆಗೆ ಬಾಂಗ್ಲಾದೇಶವನ್ನು 19 ಟೆಸ್ಟ್ ಮತ್ತು 39 ಟಿ-20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ನಾಯಕನಾಗಿ ಅವರು 52 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನೆಡೆಸಿದ್ದಾರೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ
Web Stories