ಮುಂಬೈ: ಶಾರೂಕ್ ಖಾನ್ ಪುತ್ರ ಆರ್ಯನ್ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
Advertisement
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್‍ಸಿಬಿ ಬಲೆಗೆ ಬಿದ್ದಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಿದೆ. ಮುಂಬೈನ ಸೆಷನ್ಸ್ ಕೋರ್ಟ್ ಆರ್ಯನ್ ಖಾನ್‍ಗೆ ಜಾಮೀನು ನೀಡಲು ನಿರಾಕರಿಸಿದೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ
Advertisement
Drugs on cruise ship case | Mumbai’s Special NDPS Court rejects bail applications of Aryan Khan, Arbaaz Merchant and Munmun Dhamecha pic.twitter.com/Zww2mANkUB
— ANI (@ANI) October 20, 2021
Advertisement
ಅಕ್ಟೋಬರ್ 13 ಮತ್ತು 14 ರಂದು ಎರಡು ದಿನ ಆರ್ಯನ್ ಖಾನ್ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಾದ ಆಲಿಸಿದ್ದ ಮುಂಬೈನ ಸೆಷನ್ಸ್ ಕೋರ್ಟ್‍ನ ನ್ಯಾ.ವಿ.ವಿ ಪಾಟೀಲ್‍ರವರ ಪೀಠ ಬಳಿಕ ಇಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಬೇಲ್ ನೀಡಲು ತಿರಸ್ಕರಿಸಿದೆ. ಈ ಮೂಲಕ ಆರ್ಯನ್ ಖಾನ್‍ಗೆ ಮತ್ತೆ ಜೈಲು ವಾಸ ಗತಿ ಎಂಬಂತಾಗಿದೆ. ಇದನ್ನೂ ಓದಿ: ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ
Advertisement
ವಿಚಾರಣೆಯ ವೇಳೆ ಆರ್ಯನ್ ಖಾನ್ ಪರ ವಾದ ಏನಿತ್ತು?
ಎನ್‍ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ ಮತ್ತು ಅವರ ಬಳಿಕ ಹಣವೂ ಇರಲಿಲ್ಲ, ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೇಲ್ಲ ಸುಳ್ಳು. ಆರ್ಯನ್ ಖಾನ್ ಅತಿಥಿಯಾಗಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಹೆಚ್ಚಿನ ವಿಚಾರಣೆ ಅವಶ್ಯಕತೆ ಇಲ್ಲ ಎಂದು ಹೇಳಿದೆ. ತನ್ನ ವ್ಯಾಪ್ತಿಯಲ್ಲಿ ಪ್ರಕರಣ ಇಲ್ಲದ ಕಾರಣ ಜಾಮೀನು ನೀಡಲು ನಿರಾಕರಿಸಿದೆ. ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆಗೆ ನಂಟು ಆರೋಪಿಸಿದರು ಅದನ್ನು ಪ್ರಕರಣದಲ್ಲಿ ಉಲ್ಲೇಖಿಸಿಲ್ಲ. ಆರ್ಯನ್ ಖಾನ್ ನಿಂದ ಯಾವುದೇ ಸಾಕ್ಷ್ಯ ಸಿಗದ ಹಿನ್ನಲೆ ಇಡೀ ತನಿಖೆ ವಾಟ್ಸಪ್ ಮೇಲೆ ಅವಲಂಬಿಸಿದೆ. ಜಾಮೀನು ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು.
ಎನ್‍ಸಿಬಿ ಪರ ವಕೀಲರ ವಾದ ಏನಿತ್ತು?
ಅನೀಲ್ ಸಿಂಗ್, ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಸ್ನೇಹಿತ ಅರ್ಬಾಜ್ ಮಚೆರ್ಂಟ್ ಬಳಿಕ ಮಾದಕ ವಸ್ತು ಪತ್ತೆಯಾಗಿದ್ದು, ಆರ್ಯನ್ ಖಾನ್ ಕೂಡಾ ಮಾದಕ ವ್ಯಸನಿ ಎನ್ನುವುದು ಸೂಚಿಸುತ್ತಿದೆ ಆರ್ಯನ್ ಖಾನ್ ತಮ್ಮ ಬಳಿ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಾದಿಸಬಹುದು, ಆದರೆ ಆತನ ಸ್ನೇಹಿತ ತನ್ನ ಬಳಿ ಡ್ರಗ್ ಇರುವುದು ಒಪ್ಪಿಕೊಂಡಿದ್ದಾನೆ. ಪಂಚೆನಾಮೆಗೂ ಆರೋಪಿಗಳು ಸಹಿ ಮಾಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಆರೋಪಿಗಳಿಂದ ಎಷ್ಟು ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದೆವು ಎನ್ನುವುದು ಮುಖ್ಯವಲ್ಲ. ಆರೋಪಿಗೆ ಪ್ರಕರಣಕ್ಕಿರುವ ನಂಟನ್ನು ಭೇದಿಸಬೇಕಿದೆ. ಹೀಗಾಗಿ ಇದು ಒಂದು ವರ್ಷದ ಶಿಕ್ಷೆಯ ಪ್ರಕರಣವೂ ಎನ್ನುವಂತಿಲ್ಲ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್
ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದ ಮಾತ್ರಕ್ಕೆ ಪ್ರಕರಣಕ್ಕೂ ಆರೋಪಿಗೂ ಸಂಬಂಧವೇ ಇಲ್ಲ ಎನ್ನುವಂತಿಲ್ಲ. ವಾಟ್ಸಪ್ ಚಾಟ್ ಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಖರೀದಿಸುವ ಬಗ್ಗೆ ಚರ್ಚೆ ನಡೆದಿದೆ. ಇದು ಅಂತರಾಷ್ಟ್ರೀಯ ನಂಟು ಹೊಂದಿರುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಪೆಡ್ಲರ್ ಪತ್ತೆ ಹಚ್ಚಬೇಕು ಅದಕ್ಕೆ ಆರ್ಯನ್ ಖಾನ್ ಅವಶ್ಯಕತೆ ಇದೆ. ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷ್ಯಗಳಿದೆ. ದಾಳಿ ವೇಳೆ ಅವರು ಡ್ರಗ್ ಸೇವನೆಗೆ ಪ್ಲ್ಯಾನ್ ಮಾಡಿದ್ದರು ಎಂದು ಪಂಚೆನಾಮೆಯಿಂದ ತಿಳಿದು ಬಂದಿದೆ. ಸ್ನೇಹಿತರ ಬಳಿ ಮಾದಕ ವಸ್ತುಗಳು ಪತ್ತೆಯಾಗಿದ್ದು ಆರ್ಯನ್ ಇದರ ಭಾಗವಾಗಿದ್ದಾರೆ. ತನಿಖೆಯ ಹಂತದಲ್ಲಿ ಜಾಮೀನು ನೀಡಬಾರದು ಎಂದು ವಾದಿಸಬಹುದು.