ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ತಮ್ಮ ಸಿಕ್ಸರ್ ಸಿಡಿಸುವ ಶೈಲಿಯಿಂದ ಹೆಚ್ಚು ಖ್ಯಾತಿ ಪಡೆದಿದ್ದು, ಸದ್ಯ ಅವರಿಗೆ `ಬೂಮ್ ಬೂಮ್’ ಅಫ್ರಿದಿ ಎಂಬ ಹೆಸರು ನೀಡಿದ್ದು ಟೀಂ ಇಂಡಿಯಾ ಆಟಗಾರ ಎಂದು ರಿವೀಲ್ ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ಈಗಾಗಲೇ ವಿದಾಯ ಘೋಷಿಸುವ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 476 ಸಿಕ್ಸರ್ ಸಿಡಿಸಿ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಜೊತೆಗೆ ಸ್ಥಾನ ಪಡೆದಿದ್ದಾರೆ. ಸದ್ಯ ಅಫ್ರಿದಿ ಅಭಿಮಾನಿಯೊಬ್ಬರು ಈ ಕುರಿತು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಫ್ರಿದಿ ಟೀಂ ಇಂಡಿಯಾದ ಮಾಜಿ ಆಟಗಾರ ರವಿಶಾಸ್ತ್ರಿ ತಮ್ಮ ಹೆಸರಿನ ಮುಂದೆ ಬೂಮ್ ಬೂಮ್ ಎಂದು ಸೇರಿಸಿದ್ದರು ಎಂದು ತಿಳಿಸಿದ್ದಾರೆ.
Advertisement
Ravi Shastri
— Shahid Afridi (@SAfridiOfficial) August 26, 2018
Advertisement
ರವಿಶಾಸ್ತ್ರಿ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮುನ್ನ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ತಮಗೆ ಬೂಮ್ ಬೂಮ್ ಅಫ್ರಿದಿ ಎಂದು ಹೆಸರು ನೀಡಿದ್ದಾಗಿ ವಿವರಿಸಿದ್ದಾರೆ.
Advertisement
1996 ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 117.01 ಸ್ಟ್ರೈಕ್ ರೇಟ್ ನಿಂದ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 11,186 ರನ್ ರನ್ ಗಳಿಸಿದ್ದಾರೆ. ಅಲ್ಲದೇ 541 ವಿಕೆಟ್ ಗಳಿಸಿ ಮಿಂಚಿದ್ದಾರೆ. ಅಲ್ಲದೇ 1996 ರಲ್ಲಿ ಶ್ರೀಲಂಕಾ ವಿರುದ್ಧದ ನಡೆದ ಪಂದ್ಯವೊಂದರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿದ ಸಾಧನೆಯನ್ನು ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv