ರೆಸ್ಟೋರೆಂಟ್‌ಗಳಲ್ಲಿ ಚಪಾತಿ, ಪರೋಟ, ರೋಟಿ ಮುಂತಾದ ತಿನಿಸುಗಳ ಜೊತೆ ಸೈಡ್ ಡಿಶ್ ಆಗಿ ಕಡಾಯಿ, ಗ್ರೇವಿ ಮುಂತಾದವುಗಳನ್ನು ಕೊಡುತ್ತಾರೆ. ಇದು ತಿನ್ನಲು ಬಲು ರುಚಿಯಾಗಿದ್ದು, ತಿನಿಸುಗಳ ಟೇಸ್ಟ್ ಅನ್ನು ಇನ್ನೂ ಹೆಚ್ಚಿಸುತ್ತವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಅನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ
Advertisement
ಬೇಕಾಗುವ ಸಾಮಗ್ರಿಗಳು:
ಬೆಣ್ಣೆ – 1 ಚಮಚ
ಹೆಚ್ಚಿದ ಈರುಳ್ಳಿ – 2
ಹೆಚ್ಚಿದ ಟೊಮೆಟೊ – 4
ಶಾಹಿ ಜೀರಿಗೆ – ಅರ್ಧ ಚಮಚ
ಚೆಕ್ಕೆ – 1
ಲವಂಗ- 3
ಏಲಕ್ಕಿ – 2
ಕಲ್ಲಂಗಡಿ ಬೀಜ – 1 ಚಮಚ
ಬಾದಾಮಿ, ಗೋಡಂಬಿ – ಸ್ವಲ್ಪ
ನೀರು – 1 ಕಪ್
ಹಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಪನೀರ್ ಕ್ಯೂಬ್ಸ್ – 200 ಗ್ರಾಂ
ಅಚ್ಚಖಾರದ ಪುಡಿ – 1 ಚಮಚ
ಅರಶಿಣ – ಕಾಲು ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಕೇಸರಿ – ಸ್ವಲ್ಪ
ಫ್ರೆಶ್ ಕ್ರೀಮ್ – 2 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಾಲೆಗೆ ಒಂದು ಚಮಚ ಬೆಣ್ಣೆ ಹಾಕಿಕೊಂಡು ಅದು ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿಕೊಂಡು ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಶಾಹಿ ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿಕೊಂಡು ಬಳಿಕ ಅದಕ್ಕೆ ಕಲ್ಲಂಗಡಿ ಬೀಜ, ಬಾದಾಮಿ, ಗೋಡಂಬಿ ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ.
* ಹುರಿದ ಮೇಲೆ ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಮಿಶ್ರಣಕ್ಕೆ ಹಾಕಿದ್ದ ಮಸಾಲೆ ಪದಾರ್ಥಗಳು ಅಂದರೆ ಚೆಕ್ಕೆ, ಲವಂಗ, ಏಲಕ್ಕಿಯನ್ನು ತೆಗೆದಿಡಿ.
* ಬಳಿಕ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಅದನ್ನು ಸೋಸಿಕೊಳ್ಳಿ.
* ಬಳಿಕ ಬಾಣಾಲೆಗೆ ಸ್ವಲ್ಪ ಬೆಣ್ಣೆ ಹಾಕಿಕೊಂಡು ಕರಗಿದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
* ಅದಕ್ಕೆ ಪನೀರ್ ಕ್ಯೂಬ್ಸ್ ಹಾಕಿಕೊಂಡು ಒಂದು ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಶಿಣ ಮತ್ತು ಉಪ್ಪು ಹಾಗೂ ನೀರಲ್ಲಿ ನೆನೆಸಿದ ಕೇಸರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಬಳಿಕ ಸ್ವಲ್ಪ ಸಕ್ಕರೆ ಹಾಗೂ ಫ್ರೆಶ್ ಕ್ರೀಮ್ ಸೇರಿಸಿಕೊಂಡು ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ತಿರುವಿಕೊಳ್ಳಿ. ಈಗ ಶಾಹಿ ಪನೀರ್ ತಿನ್ನಲು ರೆಡಿ. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ
Advertisement
Web Stories