ನವದೆಹಲಿ: ದೆಹಲಿಯ ಶಾಹೀನ್‌ಬಾಗ್ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಯಾವುದೇ ಗಲಾಟೆಗಳು ಆಗದೇ ಇರಲು ದಕ್ಷಿಣ ದೆಹಲಿಯ ಜಿಲ್ಲಾಡಳಿತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುತ್ತಿದೆ. ತೆರವು ಮಾಡಲು ಮುಂದಾದಾಗ ಸ್ಥಳಿಯ ನಿವಾಸಿಗಳ, ಆಪ್, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದು, ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
Advertisement
#WATCH | Delhi: AAP MLA Amanatullah Khan join the protest at Shaheen Bagh amid the anti-encroachment drive here. pic.twitter.com/4MJVGoku39
— ANI (@ANI) May 9, 2022
Advertisement
ನಿಗದಿ ಪ್ರಕಾರ ಏಪ್ರಿಲ್ 28 ರಂದೇ ತೆರವು ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಗೊಳಿಸದ ಕಾರಣ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ಇದನ್ನೂ ಓದಿ: ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ
Advertisement
ದೆಹಲಿಯ ಬಿಜೆಪಿ ಮುಖ್ಯಸ್ಥ ಅದೇಶ್ ಸಿಂಗ್ ಅವರು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರು. ರೋಹಿಂಗ್ಯಾ, ಬಾಂಗ್ಲಾದೇಶಿಯರು ಮತ್ತು ಸಮಾಜ ವಿರೋಧಿ ಶಕ್ತಿಗಳು ಇಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದ್ದರು.
Advertisement
Delhi | Locals sit on roads and stop bulldozers that have been brought for the anti-encroachment drive in the Shaheen Bagh area. pic.twitter.com/EQJOWBzAxS
— ANI (@ANI) May 9, 2022
ದಕ್ಷಿಣ ದೆಹಲಿ ಪಾಲಿಕೆ 10 ದಿನಗಳ ಕಾಲ ಶಾಹೀನ್ ಬಾಗ್ ವಲಯದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.
ಸಿಎಎ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ 2019ರ ಡಿಸೆಂಬರ್ 15 ರಿಂದ 2020ರ ಮಾರ್ಚ್ 24ರವರೆಗೆ ಭಾರೀ ಪ್ರತಿಭಟನೆ ನಡೆದಿತ್ತು.