ಶಾರುಖ್ ಖಾನ್ ಕನಸಿನ ಸೌಧ ‘ಮನ್ನತ್’. ಮುಂಬೈನ ಬಾಂದ್ರಾ ಎನ್ನುವ ದುಬಾರಿ ಪ್ರದೇಶದಲ್ಲಿ ಈ ಮನೆಯಿದ್ದು, ಈ ಮನೆಯಿಂದಲೇ ಸಮುದ್ರವನ್ನು ವೀಕ್ಷಿಸುವಂತೆ ಕಟ್ಟಿದ್ದಾರೆ ಶಾರುಖ್ ಮತ್ತು ಪತ್ನಿ ಗೌರಿ ಖಾನ್. ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನ್ನತ್ ಒಂದು ಅರ್ಥದಲ್ಲಿ ಪ್ರವಾಸಿ ತಾಣವೇ ಆಗಿದೆ. ಮುಂಬೈಗೆ ಬಂದವರು ದೂರದಿಂದಲೇ ಮನ್ನತ್ ಕಣ್ಣುತುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ
Advertisement
ಇನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮನ್ನತ್ ಸೌಧದಲ್ಲಿ ಅಷ್ಟೇ ಬೆಲೆ ಬಾಳುವ ವಸ್ತುಗಳು ಇವೆ ಎನ್ನುವುದು ಗುಟ್ಟಿನ ಸಂಗತಿ. ಈಗ ಆ ಗುಟ್ಟುಗಳೆಲ್ಲ ಒಂದೊಂದೆ ರಟ್ಟಾಗುತ್ತಿವೆ. ಈ ಮೊದಲು ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಮೊನ್ನೆಯಷ್ಟೇ ಟ್ರೆಂಡ್ ಆಗಿತ್ತು. ಭಾರೀ ದುಬಾರಿಯ ಟಿವಿಗಳನ್ನು ಈ ಮನೆಯಲ್ಲಿ ಅಳವಡಿಸಲಾಗಿದೆಯಂತೆ. ಅದು ಕೋಟಿ ಲೆಕ್ಕದಲ್ಲಿ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್
Advertisement
Advertisement
ಟಿವಿ ನಂತರ ಮನ್ನತ್ ಮನೆಯ ನೇಮ್ ಪ್ಲೇಟ್ ಬಗ್ಗೆಯೂ ಭಾರೀ ಸುದ್ದಿ ಆಗಿತ್ತು. ಬರೋಬ್ಬರಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೇಮ್ ಪ್ಲೇಟ್ ತಯಾರಾಗಿದೆಯಂತೆ. ವಜ್ರದ ಹರಳುಗಳನ್ನು ಈ ನೇಮ್ ಪ್ಲೇಟ್ ನಲ್ಲಿ ಅಳವಡಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ರಾತ್ರಿ ವೇಳ ಫಳಫಳ ಹೊಳೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಈಗ ಆ ನೇಮ್ ಪ್ಲೇಟ್ ನಾಪತ್ತೆ ಆಗಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್
Advertisement
ಕಳೆದ ಒಂದು ವಾರದಿಂದ ‘ಮನ್ನತ್’ ಎನ್ನುವ ನೇಮ್ ಪ್ಲೇಟ್ ಮನೆಯ ಮುಂದೆ ಕಾಣಿಸುತ್ತಿಲ್ಲವಂತೆ. ಕಳ್ಳತನವಾಗಿದೆಯಾ? ಅಥವಾ ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಾ? ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ನೇಮ್ ಪ್ಲೇಟ್ ಮಾತ್ರ ಇರಬೇಕಾಗಿದ್ದ ಜಾಗದಲ್ಲಿ ಕಾಣಿಸುತ್ತಿಲ್ಲ ಎನ್ನುವುದು ಲೇಟೆಸ್ಟ್ ಸುದ್ದಿ. ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ
ಶಾರುಖ್ ಖಾನ್ ಆಪ್ತರು ಹೇಳುವ ಪ್ರಕಾರ, ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಂತೆ. ಅದು ಹೊಸ ನೇಮ್ ಪ್ಲೇಟ್ ಆದ ಕಾರಣ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಅದರಲ್ಲಿ ಅಳವಡಿಸಿದ್ದರಿಂದ, ರಿಪೇರಿಗೆ ಬಂದಿದೆಯಂತೆ. ಅದನ್ನು ಸರಿ ಮಾಡಿಸಿ, ಮತ್ತೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.