CinemaDistrictsKarnatakaLatestMain PostSandalwoodSouth cinema

ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ಳೆದ ಎರಡ್ಮೂರು ವರ್ಷಗಳಿಂದ ನಯನತಾರ ಮದುವೆಯ ವಿಚಾರ ಚರ್ಚೆ ಆಗುತ್ತಲೇ ಇದೆ. ಕೊನೆಗೂ ಈ ಎಲ್ಲ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿರುವ ಈ ತಾರೆ ಜೂನ್ 5 ರಂದು, ಖ್ಯಾತ ನಿರ್ದೇಶಕ ವಿಗ್ನೇಶ್ ಶಿವನ್ ಅವರ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ತಿರುಪತಿಗೂ ಈ ಜೋಡಿ ಭೇಟಿ ನೀಡಿ, ಅಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎಂದು ಸುದ್ದಿ ಆಗಿತ್ತು. ಇದೀಗ ಮದುವೆ ದಿನಾಂಕ ಮತ್ತು ಮದುವೆ ಆಗುವ ಸ್ಥಳ ಎರಡೂ ಬದಲಾಗಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

ತಿರುಪತಿಗೆ ನಯನತಾರಾ ಮತ್ತು ವಿಗ್ನೇಶ್ ಹೋಗಿ ಬಂದ ನಂತರ ತಿರುಪತಿಯಲ್ಲೇ ಮದುವೆ ಫಿಕ್ಸ್ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ, ಮದುವೆ ದಿನಾಂಕ ಬಗ್ಗೆ ಗೊಂದಲವಾಗಿತ್ತು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಜೂನ್ 5 ರ ಬದಲಾಗಿ ಜೂನ್ 09 ರಂದು ನಯನತಾರಾ ಮತ್ತು ವಿಗ್ನೇಶ್ ಶಿವನ್ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

ತಿರುಪತಿ ಬದಲಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ತಮಿಳಿನ ನಾಡಿನ ಹೆಸರಾಂತ ರೆಸಾರ್ಟ್ ನಲ್ಲಿ ಈ ಜೋಡಿ ಮದುವೆಯಾಗಲಿದ್ದು, ಈ ಜೋಡಿಯ ಹೊಸ ಜೀವನಕ್ಕಾಗಿ ಮಹಾಬ್ಸ್ ರೆಸಾರ್ಟ್ ಶೀಘ್ರದಲ್ಲೇ ಸಿಂಗಾರಗೊಳ್ಳಲಿದೆ. ಈಗಾಗಲೇ ತಮ್ಮ ಮದುವೆಗೆ ಆಹ್ವಾನಿಸಲು ಅತಿಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿರುವ ಜೋಡಿ, ಅತ್ಯಾಪ್ತ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

ಮದುವೆಯ ನಂತರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಲ್ಲಿ ಸಿನಿಮಾ ರಂಗದ ನಟ, ನಟಿ, ತಂತ್ರಜ್ಞರಿಗೆ ಮತ್ತು ಆಪ್ತರಿಗೆ ಆಹ್ವಾನ ನೀಡಲಾಗುತ್ತದೆಯಂತೆ. ಈ ಆರತಕ್ಷತೆ ಕಾರ್ಯಕ್ರಮವು ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಆರು ವರ್ಷಗಳಿಂದ ಪ್ರೀತಿಸುತ್ತಿರುವ ನಯನತಾರಾ ಮತ್ತು ವಿಘ್ನೇಶ್ ಮದುವೆಯ ಮುನ್ನ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಕೂಡ ಪಡೆದಿದ್ದಾರೆ.

Leave a Reply

Your email address will not be published.

Back to top button