– ಟಾಪ್-5 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಳಪತಿ, ಸಲ್ಮಾನ್ ಖಾನ್, ಬಿಗ್ ಬಿ
ನವದೆಹಲಿ: ಸದ್ಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತೆ ಸುದ್ದಿಯಲ್ಲಿದ್ದಾರೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫಾರ್ಚೂನ್ ಇಂಡಿಯಾ (Fortune India) ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ವಿರಾಟ್ ಕೊಹ್ಲಿ 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ಒಟ್ಟಾರೆ ಸೆಲೆಬ್ರಿಟಿಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಹೇಮಾ ಸಮಿತಿ ಕ್ರಾಂತಿ ಎಬ್ಬಿಸಿದೆ: ಸ್ಯಾಂಡಲ್‌ವುಡ್‌ನಲ್ಲೂ ಕಮಿಟಿಯಾಗಬೇಕು ಎಂದ ನೀತು
Advertisement
Advertisement
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni), 38 ಕೋಟಿ ರೂ. ಪಾವತಿಸಿದ್ದಾರೆ. ಲೆಜೆಂಡರಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 28 ಕೋಟಿ ರೂ., ಸೌರವ್ ಗಂಗೂಲಿ 23 ಕೋಟಿ ರೂ. ಹಾರ್ದಿಕ್ ಪಾಂಡ್ಯ 13 ಕೋಟಿ ರೂ., ರಿಷಬ್ ಪಂತ್ 10 ಕೋಟಿ ರೂ. ಟ್ಯಾಕ್ಸ್ ಪಾವತಿ ಮಾಡಿದ್ದಾರೆ ಎಂದು ವರದಿ ಹೇಳಿದೆ.
Advertisement
ಫಾರ್ಚೂನ್ ಇಂಡಿಯಾ ವರದಿ ಪ್ರಕಾರ, ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್‌ನ ಬಾದ್‌ಶಾ 92 ಕೋಟಿ ರೂ. ಪಾವತಿಸಿದ್ದಾರೆ. ತಮಿಳಿನ ದಳಪತಿ ವಿಜಯ್ 80 ಕೋಟಿ ರೂ. ಪಾವತಿಸಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ 75 ಪಾವತಿಸಿರುವ ಸಲ್ಮಾನ್ ಖಾನ್, 71 ಕೋಟಿ ಪಾವತಿಸಿರುವ ಅಮಿತಾಬ್ ಬಚ್ಚನ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಹಿತಾ ಮಾತು
Advertisement
2023-24ರ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ವಿವರ
ಶಾರೂಖ್ ಖಾನ್ – 92 ಕೋಟಿ ರೂ.
ದಳಪತಿ ವಿಜಯ್ – 80 ಕೋಟಿ ರೂ.
ಸಲ್ಮಾನ್ ಖಾನ್ – 75 ಕೋಟಿ ರೂ.
ಅಮಿತಾಬ್ ಬಚ್ಚನ್ – 71 ಕೋಟಿ ರೂ.
ವಿರಾಟ್ ಕೊಹ್ಲಿ – 66 ಕೋಟಿ ರೂ.
ಅಜಯ್ ದೇವಗನ್ – 42 ಕೋಟಿ ರೂ.
ಎಂ.ಎಸ್ ಧೋನಿ – 38 ಕೋಟಿ ರೂ.
ರಣಬೀರ್ ಕಪೂರ್ – 36 ಕೋಟಿ ರೂ.
ಸಚಿನ್ ತೆಂಡೂಲ್ಕರ್ – 28 ಕೋಟಿ ರೂ.
ಹೃತಿಕ್ ರೋಷನ್ – 28 ಕೋಟಿ ರೂ.
ಕಪಿಲ್ ಶರ್ಮಾ – 26 ಕೋಟಿ ರೂ.
ಸೌರವ್ ಗಂಗೂಲಿ- 23 ಕೋಟಿ ರೂ.
ಕರೀನಾ ಕಪೂರ್ – 20 ಕೋಟಿ ರೂ.
ಶಾಹಿದ್ ಕಪೂರ್ – 14 ಕೋಟಿ ರೂ.
ಮೋಹನ್ ಲಾಲ್ – 14 ಕೋಟಿ ರೂ.
ಅಲ್ಲು ಅರ್ಜುನ್ – 14 ಕೋಟಿ ರೂ.
ಹಾರ್ದಿಕ್ ಪಾಂಡ್ಯ – 13 ಕೋಟಿ ರೂ.
ರಿಷಭ್ ಪಂತ್ 10 ಕೋಟಿ ರೂ.