ಮಾಲಿವುಡ್‌ನಲ್ಲಿ ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು ಎಂದು ಸಂಗೀತಾ ಭಟ್ ಬಳಿಕ ನಟಿ ಹಿತಾ ಚಂದ್ರಶೇಖರ್ (Hitha Chandrashekar) ಕೂಡ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಧ್ವನಿಯೆತ್ತಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು ಎಂದು ಹಿತಾ ಮಾತನಾಡಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು: ನಟಿ ಸಂಗೀತಾ ಭಟ್
Advertisement
ಹೇಮಾ ಕಮಿಟಿ ಹಾಗೆಯೇ ನಮ್ಮ ಕನ್ನಡ ಚಿತ್ರರಂಗದಲ್ಲೂ ಕಮಿಟಿ ರಚನೆ ಆಗಬೇಕು ಎಂಬ ಮನವಿಗೆ ನಾನು ಕೂಡ ಸಹಿ ಹಾಕಿದ್ದೇನೆ. ನಾನು ಕಲಾವಿದೆಯಾಗಿ ನನ್ನ ಕಲೆ ಕಡೆ ಗಮನ ಕೊಡಬೇಕು. ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕರಹಿತ ವಾತಾವರಣ ಇರಬೇಕು ಅಂದರೆ ಹೇಮಾ ಕಮಿಟಿ ರೀತಿ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು ಎಂದಿದ್ದಾರೆ ಹಿತಾ.
Advertisement
Advertisement
ಕೆಲಸ ಮಾಡುವ ವೇಳೆ ಲೈಂಗಿಕ ದೌರ್ಜನ್ಯ ಆಗುತ್ತಾ? ತಾರತಮ್ಮ ಇರುತ್ತಾ? ಸಮಾನತೆ ಇರೋದಿಲ್ವಾ ಅನ್ನೋ ಭಯ ನಮ್ಮಲ್ಲಿ ಇರಬಾರದು ಅನ್ನೋದಾದ್ರೆ ಮಲಯಾಳಂ ಸಿನಿಮಾ ಇಂಡಸ್ಟ್ರಿ ರೀತಿ ಸಮಿತಿ ರಚನೆಯಾಗಲೇಬೇಕೆಂದು ಹಿತಾ ಮಾತನಾಡಿದ್ದಾರೆ.
Advertisement
ಬೇರೆ ಇಂಡಸ್ಟ್ರಿಯಲ್ಲಿ ಹೇಗೆ ಈ ಕುರಿತು ಅಲೆ ಮೂಡಿದ್ಯೋ ಅದೇ ರೀತಿ ನಮ್ಮಲ್ಲೂ ಬದಲಾವಣೆಯಾಗಬೇಕು. ಅದಕ್ಕೆ ನಮ್ಮ ಸರ್ಕಾರ ಕೂಡ ಸೂಕ್ತ ನಿರ್ಣಯ ತೆಗೆದುಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.