ಕ್ಯಾನ್ಬೆರಾ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ಮೆಲ್ಬೋರ್ನ್ ಮೂಲದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಭಾರತೀಯ ಚಿತ್ರರಂಗ ಹೊರತುಪಡಿಸಿ ಶಾರೂಕ್ ಖಾನ್ ಅವರು ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ. ಈ ಬಗ್ಗೆ ಲಾ ಟ್ರೋಬ್ ವಿಶ್ವವಿದ್ಯಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಾರೂಕ್ ಖಾನ್ ಡಾಕ್ಟರೇಟ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
‘I am deeply grateful to @latrobeuni for its graciousness in offering scholarships for the education of young women from my country. I doff my hat a million times to you!' – @iamsrk
Read about the La Trobe PhD scholarship in honour of Shah Rukh Khan: https://t.co/JWkOXJ9Wl8 #SRK pic.twitter.com/fJ7ldcbCMN
— La Trobe University (@latrobe) August 9, 2019
Advertisement
ಬಳಿಕ ಮಾತನಾಡಿದ ಶಾರೂಕ್ ಖಾನ್, ಭಾರತೀಯ ಸಂಸ್ಕೃತಿಯೊಂದಿಗೆ ಸುದೀರ್ಘ ಒಡನಾಟ ಮತ್ತು ಮಹಿಳಾ ಸಮಾನತೆಗಾಗಿ ಪ್ರತಿಪಾದಿಸುವಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿರುವ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯಲು ಹೆಮ್ಮೆಯಾಗುತ್ತಿದೆ. ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ನನ್ನ ಸಾಧನೆಗಳನ್ನು ಗುರುತಿಸಿದ್ದಕ್ಕಾಗಿ ಲಾ ಟ್ರೋಬ್‍ಗೆ ಪ್ರಾಮಾಣಿಕವಾಗಿ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
Advertisement
'This is not an award for anything the @MeerFoundation might have achieved. It is for the courage of every woman who faces the brutality of injustice, inquality and inhumanity.' – @iamsrk on receiving a #latrobeuni honorary doctorate for his humanitarian work with women. pic.twitter.com/paIHifVsIe
— La Trobe University (@latrobe) August 9, 2019
Advertisement
ಲಾ ಟ್ರೋಬ್ ವಿಶ್ವವಿದ್ಯಾಲಯವು ಶಾರೂಖ್ ಖಾನ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಜೊತೆ ಗೌರವ ನೀಡಿದ ಮೊದಲ ಆಸ್ಟ್ರೇಲಿಯಾ ವಿಶ್ವವಿದ್ಯಾಲಯವಾಗಿದೆ. ಚಲನಚಿತ್ರೋತ್ಸವದಲ್ಲಿ ಶಾರೂಕ್ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ಕೂಡ ದೊರೆತಿದೆ.
ಈ ಮೊದಲು ಶಾರೂಕ್ ಖಾನ್ ಅವರಿಗೆ ನಾಲ್ಕು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. 2009 ಬೆಡ್‍ಫೋಡ್ರ್ಶೈರ್ ವಿಶ್ವವಿದ್ಯಾಲಯ, 2015ರಲ್ಲಿ ಎಡಿನ್‍ಬರ್ಗ್ ವಿಶ್ವವಿದ್ಯಾಲಯ, 2016ರಲ್ಲಿ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ, 2019ರಲ್ಲಿ ಯೂನಿವರ್ಸಿಟಿ ಆಫ್ ಲಾನಿಂದ ಡಾಕ್ಟರೇಟ್ ಪಡೆದಿದ್ದಾರೆ.