ರಾಮ್ ಚರಣ್‌ಗೆ ‘ಇಡ್ಲಿ ವಡಾ’ ಎಂದ ಶಾರುಖ್ ಖಾನ್- ಫ್ಯಾನ್ಸ್ ಆಕ್ರೋಶ

Public TV
1 Min Read
ram charan 1 1

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ (Mukesh Ambani) ಮಗ ಅನಂತ್ ಪ್ರೀ- ವೆಡ್ಡಿಂಗ್‌ ಕಾರ್ಯಕ್ರಮ ಅದ್ಧೂರಿಯಾಗಿ ತೆರೆಬಿದ್ದಿದೆ. ಇಡೀ ಬಾಲಿವುಡ್ ಸೆಲೆಬ್ರಿಟಿಗಳು ಅಂಬಾನಿ ಮನೆ ಫಂಕ್ಷನ್‌ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಭಾಗಿಯಾಗಿದ್ದ ವೇಳೆ, ‘ಆರ್‌ಆರ್‌ಆರ್’ (RRR) ಹೀರೋ ರಾಮ್ ಚರಣ್‌ಗೆ (Ram Charan) ಇಡ್ಲಿ- ವಡಾ ಎಂದು ಶಾರುಖ್ ಖಾನ್ ಕರೆದಿದ್ದಾರೆ. ಅದಕ್ಕೆ ಚರಣ್ ಫ್ಯಾನ್ಸ್ ಕಿಂಗ್ ಖಾನ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

sharukh khan

ಇಡ್ಲಿ- ವಡಾ ಸೌತ್‌ನ ಸ್ಪೆಷಲ್ ತಿಂಡಿ. ಆದರೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಸೌತ್ ನಟ ರಾಮ್ ಚರಣ್‌ನನ್ನು ಇಡ್ಲಿ ಅಂತ ಕರೆಯೋದಾ? ಕಿಂಗ್‌ಖಾನ್ ಶಾರುಖ್ ಮಾತಿನ ಭರದಲ್ಲಿ ಮದ ಹೊರಹಾಕಿದ್ದಾರೆ. ಅಷ್ಟಕ್ಕೂ ಇಡ್ಲಿ ವಡೆ ಅಂದಿದ್ದು ಯಾರಿಗ್ ಗೊತ್ತೆ? ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

ಅಂಬಾನಿ ಕುಡಿ ಅನಂತ್ ಅಂಬಾನಿ ಮದುವೆಗೆ ಸಾಕ್ಷಿಯಾಗಿದ್ದ ದಕ್ಷಿಣ ಸೆಲೆಬ್ರಿಟಿಗಳು ಅಂದ್ರೆ ರಜನಿಕಾಂತ್ ಕುಟುಂಬ ಇನ್ನೊಂದು ರಾಮ್‌ಚರಣ್ ಕುಟುಂಬ. ಜಗತ್ತಿನ ಖ್ಯಾತನಾಮರೆಲ್ಲ ಸೇರಿದ್ದ ಮದುವೆ ಪ್ರೀ- ವೆಡ್ಡಿಂಗ್‌ ಕಾರ್ಯಕ್ರಮದ ವೇದಿಕೆಯಲ್ಲಿ ನಟ-ನಟಿಯರು ಬಂದು ತಮ್ಮ ಟ್ಯಾಲೆಂಟ್ ತೋರಿಸಿದ್ರು. ಈ ವೇಳೆ, ಆತುರಕ್ಕೆ ಬಿದ್ದ ಶಾರುಖ್ ಎಡವಟ್ಟು ಮಾಡ್ಕೊಂಡಿದ್ದಾರೆ. ರಾಮ್‌ಚರಣ್ ಹಾಡಿಗೆ ಹೆಜ್ಜೆ ಹಾಕುವ ವೇಳೆ, ರಾಮ್‌ಚರಣ್‌ರನ್ನ ವೇದಿಕೆ ಮೇಲೆ ಕರೆಯೋ ಭರದಲ್ಲಿ ಇಡ್ಲಿ-ವಡೆ ರಾಮ್‌ಚರಣ್ ಮೇಲೆ ಬನ್ನಿ ಎಂದಿದ್ದಾರೆ.

‘ಆರ್‌ಆರ್‌ಆರ್’ (RRR) ನಾಟು-ನಾಟು ಸೂಪರ್ ಹಿಟ್ ಹಾಡು. ಇದಕ್ಕೆ ಆಸ್ಕರ್ ಪ್ರಶಸ್ತಿ ಕೂಡ ದಕ್ಕಿತ್ತು. ಈ ಹಾಡಿಗೆ ಹೆಜ್ಜೆ ಬಾರದ ಸಲ್ಮಾನ್-ಶಾರುಖ್-ಆಮೀರ್ ಖಾನ್ ನೃತ್ಯ ಮಾಡಲು ಶುರು ಹಚ್ಕೊಂಡ್ರು. ಈ ವೇಳೆ, ಕೆಳಗೆ ಕುಳಿತಿದ್ದ ರಾಮ್‌ಚರಣ್‌ರನ್ನ ಮೇಲೆ ಕರೆದಿರುವ ಕಿಂಗ್ ಖಾನ್ ರಾಮ್‌ಚರಣ್ ಹೆಸರಿನ ಹಿಂದೆ ಇಡ್ಲಿ-ವಡೆ ಸೇರಿಸಿದ್ದು, ಅಪಹಾಸ್ಯ ಮಾಡಿದಂತಿದೆ ಎಂದು ಟೀಕೆಗೊಳಗಾಗಿದೆ. ಆದರೆ ಉತ್ತರದವರು ಇದೊಂದು ಸಿನಿಮಾ ಡೈಲಾಗ್ ಬದಲಿಸಿ ಹೇಳಿದ್ದಾರೆ. ಶಾರುಖ್ ಎಲ್ಲರಿಗೂ ಗೌರವ ಕೊಡ್ತಾರೆ ಎಂದು ಫ್ಯಾನ್ಸ್ ಚರ್ಚೆಗಿಳಿದಿದ್ದಾರೆ.

Share This Article