ಕಲಬುರಗಿ: ಸಂದರ್ಶನಕ್ಕೆ ಬಂದ ಪಿಎಚ್ಡಿ ವಿದ್ಯಾರ್ಥಿನಿಯ ಜೊತೆ ಗುಲ್ಬರ್ಗಾ ವಿವಿ ಉಪನ್ಯಾಸಕ ಅಸಭ್ಯವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
ಇಂಗ್ಲಿಷ್ ವಿಭಾಗದ ಉಪನ್ಯಾಸಕ ರಮೇಶ್ ರಾಠೋಡ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಜೂನ್ 7ರಂದು ವಿವಿಗೆ ಸಂದರ್ಶನಕ್ಕೆ ಬಂದಿದ್ದ ವೇಳೆ ಉಪನ್ಯಾಸಕ ರಮೇಶ್ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
Advertisement
Advertisement
ಈ ಸಂಬಂಧ ಯುವತಿ ತನ್ನ ಪೋಷಕರೊಂದಿಗೆ ವಿವಿ ಪೊಲೀಸ್ ಠಾಣೆಯಲ್ಲಿ ಜೂನ್ 9ರಂದು ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೊಂದ ಯುವತಿ ಹೇಳಿದ್ದಾರೆ.
Advertisement