ಬೆಂಗಳೂರು: ಕೇರಳ ಪೊಲೀಸರು ಬೆಂಗಳೂರಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ವಿವೇಕ ನಗರಕ್ಕೆ ಆಗಮಿಸಿದ್ದ ಕೇರಳದ ಇಡುಕ್ಕಿಯ ಪೊಲೀಸರ ಮೇ 27ರಂದು ಲೈಂಗಿಕ ದೌರ್ಜನ್ಯ ಎಸಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ತೋಡುಪುಯಾದ ಪಿಎಸ್ ಐ ಅರುಣ್ ನಾರಾಯಣ ಹಾಗೂ ಇನ್ನಿಬ್ಬರು ಪೊಲೀಸರು ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಆರೋಪ ಏನು?
ಕೇರಳ ಇಡುಕ್ಕಿಯ ಸಿಬಿ ಸಿಐಡಿ ಪೊಲೀಸರು ತನಿಖೆ ಮೇಲೆ ವ್ಯಕ್ತಿಯೊಬ್ಬನ ವಿಚಾರಣೆಗಾಗಿ ವಿವೇಕನಗರದ ಕಚೇರಿಗೆ ಬಂದಿದ್ದರು. ಈ ವೇಳೆ ಆ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಯುವತಿ ಪೊಲೀಸರನ್ನು ಕಚೇರಿ ಒಳಗೆ ಬಿಡಲು ನಿರಾಕರಿಸಿದ್ದಾರೆ.
Advertisement
ಯುವತಿಯ ಮೇಲೆ ಕೋಪಗೊಂಡು ಕೇರಳ ಪೊಲೀಸರಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಕೇರಳ ಪೊಲೀಸರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದಾರೆ. ಮೊದಲು ಯುವತಿ ಕೇರಳ ಪೊಲೀಸರ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾದರು. ಆದರೆ ಪೊಲೀಸರು ಮೊದಲಿಗೆ ಕೇರಳ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
Advertisement
ದೂರು ದಾಖಲಿಸಿಕೊಳ್ಳದ ಕಾರಣ ಸಂತ್ರಸ್ತ ಯುವತಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಹಿರಿಯ ಅಧಿಕಾರಿಗಳ ಅಣತಿಯಂತೆ ಪೊಲೀಸರು ಈಗ ದೂರು ಸ್ವೀಕರಿಸಿದ್ದು, ಐಪಿಸಿ ಸೆಕ್ಷನ್ 354 ಎ, 506, 34, 504 ಅಡಿಯಲ್ಲಿ ಕೇಸ್ ದಾಖಲಾಗಿದೆ.