ವಿಜಯಪುರ: ಅನ್ಯಕೋಮಿನ ಯುವಕನೊಬ್ಬ Youth) ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮದಲ್ಲಿ ಘಟನೆ ನಡೆದಿದೆ.
ಅನ್ಯಕೋಮಿನ ಯುವಕ ಸೋಹೇಲ್ ಹೊನಮುರಗಿಯಿಂದ ಅಪ್ರಾಪ್ತೆ (Minor Girl) ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಪ್ರಾಪ್ತೆಯನ್ನು ಪುಸಲಾಯಿಸಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್ ತಿರುಗೇಟು
ಆರೋಪಿ ಇದೇ ತಿಂಗಳ ಮೇ 13ರಂದು ಅಪ್ರಾಪ್ತೆಯನ್ನ ಮಹಾರಾಷ್ಟ್ರಕ್ಕೆ (Maharashtra) ಕರೆದುಕೊಂಡು ಹೋಗಿದ್ದಾನೆ, ಮೇ 17ರಂದು ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಮಗಳು ನಾಲ್ಕು ದಿನಗಳಿಂದ ಮನೆಗೆ ಬಾರದಿದ್ದನ್ನು ಕಂಡು ಪೋಷಕರು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Indi Rural Police Station) ದೂರು ದಾಖಲಿಸಿದ್ದಾರೆ.
ಪೋಷಕರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸೋಹೇಲ್ ವಿರುದ್ಧ ಕಲಂ 366, 376(2) (IPC), ಮತ್ತು ಐಪಿಸಿ ಸೆಕ್ಷನ್ 4, 6, 12, ಪೋಕ್ಸೋ ಕಾಯ್ದೆ 2012 ಅಡಿಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: 10.76 ಲಕ್ಷ ಪ್ರಯಾಣಿಕರಿಗೆ ದಂಡ – ಬರೋಬ್ಬರಿ 5.38 ಕೋಟಿ ಸಂಗ್ರಹಿಸಿದ BMRCL