ಕನ್ನಡದ ‘ಟೋಬಿ’ ಬ್ಯೂಟಿ ಚೈತ್ರಾ ಆಚಾರ್‌ಗೆ (Chaithra Achar) ಕನ್ನಡ ಮತ್ತು ತಮಿಳು ಚಿತ್ರರಂಗದಿಂದ ಅವಕಾಶಗಳು ಅರಸಿ ಬರುತ್ತಿವೆ. ಎರಡು ಕಡೆ ನಟಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಆಕ್ಸ್ ಮಿ ಸೆಷನ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ, ನೀವು ಸಿನಿಮಾ ಅವಕಾಶಕ್ಕಾಗಿ ಸೆಕ್ಸ್ ಮಾಡಿದ್ದೀರಾ? ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟಿ ತಕ್ಕ ಉತ್ತರವನ್ನೇ ನೀಡಿದ್ದಾರೆ. ಅವಕಾಶಕ್ಕಾಗಿ ಎಂದು ಪಲ್ಲಂಗ ಏರಿಲ್ಲ. ಯಾಕೆಂದರೆ ನಾನು ಪ್ರತಿಭಾವಂತೆ. ಹಾಗಾಗಿ ಸೆಕ್ಸ್ ಮಾಡಿ ಅವಕಾಶ ಪಡೆದುಕೊಳ್ಳಬೇಕು ಎಂಬ ಅಗತ್ಯ ನನಗಿಲ್ಲ ಎಂದಿದ್ದಾರೆ.

ಬಳಿಕ ಮತ್ತೊಬ್ಬರು, ನಿಮ್ಮ ಕನ್ಯತ್ವ ಹೇಗೆ ಕಳೆದುಕೊಂಡ್ರಿ? ಮತ್ತು ಆ ಅನುಭವ ಹೇಗಿತ್ತು ಎಂದಿದ್ದಾರೆ. ಅದಕ್ಕೆ ನಟಿ, ನಿಮ್ಮ ಮನೆಯಲ್ಲಿ ನಿಮ್ಮ ತಾಯಿ, ತಂಗಿ ಇದ್ದಾರೆ ಅಲ್ಲವೇ? ಅವರನ್ನೇ ಕೇಳಿ. ಇದರ ಪ್ರೋಸೆಸ್ ಹೇಗಿತ್ತು? ಎಂದು ಕೇಳಿ ಜೊತೆಗೆ ಡೆಮೋ ತೋರಿಸಲು ಹೇಳಿ ಅಣ್ಣ. ಅದನ್ನು ನೀವು ಹತ್ತಿರದಿಂದ ನೋಡಬಹುದು ಎಂದು ತಕ್ಕ ಉತ್ತರ ಕೊಟ್ಟಿದ್ದಾರೆ ಚೈತ್ರಾ. ನಟಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, ಕನ್ನಡದ ಜೊತೆ ತಮಿಳಿನ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಮತ್ತು ‘ಟೋಬಿ’ ಚಿತ್ರದಲ್ಲಿನ ಚೈತ್ರಾ ನಟನೆಗೆ ಅಭಿಮಾನಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ.
