ನವದೆಹಲಿ: ಆಗ್ನೇಯ ಬಂಗಾಳಕೊಲ್ಲಿಯಲ್ಲಿ (Bay of Bengal) ಸೃಷ್ಟಿಯಾಗಿರುವ ಮೋಚಾ ಚಂಡಮಾರುತ (Cyclone Mocha) ಅತ್ಯಂತ ತೀವ್ರ ಸ್ವರೂಪ ತಾಳಿದೆ. ಪ್ರಸ್ತುತ ಚಂಡಮಾರುತ ಪೋರ್ಟ್‌ಬ್ಲೇರ್‌ನಿಂದ 520 ಕಿ.ಮೀ ದೂರದ ಆಗ್ನೇಯ ದಿಕ್ಕಿನಲ್ಲಿ ಚಲಿಸುತ್ತಿದೆ.
ಮೋಚಾ ಚಂಡಮಾರುತ ಜನತೆಯನ್ನು ಭೀತಿಗೆ ತಳ್ಳಿದೆ. ಇದು ಕರಾವಳಿ ಭಾಗದಲ್ಲಿ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಬಂಗಾಳ (West Bengal) ಸೇರಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: 115-120 ಸೀಟ್ ಗೆಲ್ತೀವಿ – ಹೋಟೆಲಿನಲ್ಲಿ ದೋಸೆ ಸವಿದ ಬಿಜೆಪಿ ನಾಯಕರು
Advertisement
Advertisement
ಶನಿವಾರ ತ್ರಿಪುರಾ, ಮಿಜೋರಾಂ ಮತ್ತು ಬಂಗಾಳದಲ್ಲಿ ಭಾರೀ ಮಳೆಯಾಗಲಿದೆ. ಭಾನುವಾರ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ರಣಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಮೋಚಾ ಚಂಡಮಾರುತ ಬಳಿಕ ಬಾಂಗ್ಲಾದೇಶ ಮತ್ತು ಮಯನ್ಮಾರ್ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ