ದುಬೈ: ಚಂಡಮಾರುತದಿಂದಾಗಿ ಸಂಕಷ್ಟ ಎದುರಿಸಿದ್ದ ಅರಬ್ ಸಂಯುಕ್ತ ಸಂಸ್ಥಾನ (UAE)ದಲ್ಲಿ ಎರಡು ವಾರಗಳ ನಂತರ ಮತ್ತೆ ಭಾರೀ ಮಳೆ ಸುರಿಯುತ್ತಿದೆ. ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ರದ್ದತಿಗೆ ಇದು ಕಾರಣವಾಗಿದೆ.
ಕಳೆದ ತಿಂಗಳು ದೇಶಕ್ಕೆ ಅಪ್ಪಳಿಸಿದ ಅಭೂತಪೂರ್ವ ಮಳೆಗಿಂತ ಈ ಮಳೆಯು ಕಡಿಮೆ ತೀವ್ರತೆಯಿಂದ ಕೂಡಿರಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. 1949 ರ ಬಳಿಕ ದುಬೈನಲ್ಲಿ ದಾಖಲೆಯ ಮಳೆಯಾಗಿದೆ. ಇದನ್ನೂ ಓದಿ: ಚೀನಾಗೆ ಮಸ್ಕ್ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?
Advertisement
Advertisement
ಯುಎಇಯಾದ್ಯಂತ ಹವಾಮಾನ ವೈಪರೀತ್ಯವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
Advertisement
ಪ್ರಮುಖ ನಗರಗಳಾದ್ಯಂತ ಭಾರೀ ಗಾಳಿ ಬೀಸುವುದರೊಂದಿಗೆ ಲಘು ಮಳೆ ಬೀಳುತ್ತಿದೆ. ಗುರುವಾರ ಮತ್ತು ಶುಕ್ರವಾರದಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ರಿಮೋಟ್ ವರ್ಕ್ ಸಿಸ್ಟಮ್‌ಗೆ ಸೂಚಿಸಲಾಗಿದೆ. ಇದನ್ನೂ ಓದಿ: Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್ ಸಿಗ್ನಲ್!
Advertisement
ಪ್ರವಾಹಪೀಡತ ಪ್ರದೇಶಗಳಿಂದ ದೂರ ಇರಲು ಸ್ಥಳೀಯರಿಗೆ ಸೂಚಿಸಲಾಗಿದೆ. ಈ ಪ್ರದೇಶಗಳಿಂದ ದೂರವಿರಲು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ತಿಳಿಸಲಾಗಿದೆ. ಯುಎಇ ಪಶ್ಚಿಮ ಪ್ರದೇಶಗಳು, ಕರಾವಳಿ ಹಾಗೂ ಕೆಲವು ಪೂರ್ವ ಪ್ರದೇಶಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ, ಸಣ್ಣ ಆಲಿಕಲ್ಲು ಮಳೆಯಾಗಿದೆ.