ಪೋರ್ಟ್ ಹಾರ್ಕೋಟ್: ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರೀ ಸ್ಫೋಟ 100ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಕ್ಷಿಣ ನೈಜಿರಿಯಾದ ಇಮೋ ರಾಜ್ಯದ ನಡುವಿನ ಗಡಿಯಲ್ಲಿ ಘಟನೆ ಸಂಭವಿಸಿದೆ. ಸ್ಫೋಟದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ. ನೈಜಿರಿಯಾದಲ್ಲಿ ಇತ್ತೀಚಿಗೆ ನಡೆದ ಅತಿದೊಡ್ಡ ಸ್ಫೋಟವಾಗಿದೆ.
Advertisement
Advertisement
ಅಕ್ರಮ ಸಂಸ್ಕರಣಾಗಾರದ ಸ್ಥಳದಲ್ಲಿ ನಿರ್ವಾಹಕರು ಮತ್ತು ಪೋಷಕರು ವ್ಯಾಪಾರಕ್ಕಾಗಿ ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಅಭಿಯಾನ
Advertisement
Advertisement
ಅಕ್ರಮ ಕಚ್ಚಾ ತೈಲ ಸಂಸ್ಕರಣೆಯು ದಕ್ಷಿಣ ನೈಜಿರಿಯಾದ ತೈಲ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಅಲ್ಲಿ ತೈಲ ಕಳ್ಳರು ಕಚ್ಚಾ ತೈಲವನ್ನು ಕದಿಯಲು ಪೈಪ್‍ಲೈನ್‍ಗಳನ್ನು ಹಾಳುಮಾಡುತ್ತಾರೆ. ಅದನ್ನು ಅವರು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಂಸ್ಕರಿಸುತ್ತಾರೆ.ಈ ಕಳ್ಳ ಸಾಗಣಿಕೆಯನ್ನು ತಡೆಯಲು ಸರ್ಕಾರ ಮಿಲಿಟರಿ ಪಡೆಯನ್ನು ನೇಮಿಸಿದೆ. ಆದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್