ನವದೆಹಲಿ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 11 ಸಚಿವರಿದ್ದಾರೆ. ಅವರಲ್ಲಿ 7 ಮಂದಿ ಕ್ರಿಮಿನಲ್ ಪ್ರಕರಣ ಉಳ್ಳವರಾಗಿದ್ದು, 7ರಲ್ಲಿ 4 ಮಂದಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ.
ಪಂಜಾಬ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಿಎಂ ಸೇರಿದಂತೆ ಎಲ್ಲ ಸಚಿವರ ಅಫಿಡಿವೇಟ್‌ಗಳನ್ನು ವಿಶ್ಲೇಷಿಸಿದೆ. 7 ಮಂದಿ ಸಚಿವರು (ಶೇ.64) ತಮ್ಮ ವಿರುದ್ಧ ಕ್ರಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಗಂಭೀರ ಎದುರಿಸುವುದಾಗಿ ಹೇಳಿದ್ದಾರೆ. ಅಲ್ಲದೆ, 11 ಸಚಿವರಲ್ಲಿ 9 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಬ್ರಾಮ್ ಶಂಕರ್ (ಜಿಂಪಾ) ಅವರು 8.56 ಕೋಟಿ, ಭೋವಾ (ಎಸ್‌ಸಿ) ಕ್ಷೇತ್ರದ ಲಾಲ್‌ಚಂದ್ ಅವರು 6.19 ಲಕ್ಷ, ಬ್ರಾಮ್ ಶಂಕರ್ 1.08 ಕೋಟಿ ಕನಿಷ್ಠ ಘೋಷಿತ ಆಸ್ತಿಯನ್ನು ಹೊಂದ್ದಾರೆ. ಇದನ್ನೂ ಓದಿ: ಯೋಗಿ ಪ್ರಮಾಣವಚನಕ್ಕೂ ಮುನ್ನವೇ ಹೊರಬಿತ್ತು ಸಚಿವ ಆಕಾಂಕ್ಷಿಗಳ ಪಟ್ಟಿ- ರೇಸ್‍ನಲ್ಲಿ ಯಾರಿದ್ದಾರೆ ನೋಡಿ
Advertisement
Advertisement
ಶೈಕ್ಷಣಿಕ ಅರ್ಹತೆ
ಭಗವಂತ್‌ನ ಸಂಪುಟದಲ್ಲಿರುವ ಐವರು ಸಚಿವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು 10 ಮತ್ತು 12ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. ಉಳಿದವರು ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನವರು. 6 ಸಚಿವರು ತಮ್ಮ ವಯಸ್ಸು 31 ರಿಂದ 50 ವರ್ಷ ಎಂದು ಘೋಷಿಸಿದ್ದಾರೆ, ಐವರು 51 ಮತ್ತು 60 ವರ್ಷ ವಯಸ್ಸಿನವರೆಂದು ಘೋಷಿಸಿಕೊಂಡಿದ್ದಾರೆ.
Advertisement
ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹರ್ಪಾಲ್ ಸಿಂಗ್ ಚೀಮಾ, ಗುರ್ಮೀತ್ ಸಿಂಗ್ ಮೀತ್ ಹಯರ್, ಡಾ.ಬಲ್ಜಿತ್ ಕೌರ್, ಶಾಸಕ ಹರ್ಭಜನ್ ಸಿಂಗ್ ಇಟಿಒ, ಡಾ.ವಿಜಯ್ ಸಿಂಗ್ಲಾ, ಲಾಲ್ ಚಂದ್ ಕಟಾರು ಚಾಕ್, ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಹೊಶಿಯಾರ್‌ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದ್ದರು. ಇದನ್ನೂ ಓದಿ: 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ