ಹೈದರಾಬಾದ್: ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ರುಂಡ ಹಾಗೂ ಮುಂಡವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಸಂಗ ರೆಡ್ಡಿ ಜಿಲ್ಲೆಯ ಸುತ್ತಮುತ್ತಲಿನ ವಿವಿಧ ಜಲಮೂಲಗಳಲ್ಲಿ ಎಸೆದಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ಥಿಕ ವಿವಾದಗಳನ್ನು ಹೊರತು ಪಡಿಸಿ ವ್ಯಕ್ತಿ ಆರೋಪಿಯ ಪತ್ನಿ ಜೊತೆ ಹೊಂದಿದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ವ್ಯಕ್ತಿಯನ್ನು ಬಾಡಿಗೆದಾರರೇ ಕೊಂದಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ
Advertisement
Advertisement
ಮೃತ ದುರ್ದೈವಿಯನ್ನು ಕೆ.ರಾಜು ಎಂದು ಗುರುತಿಸಲಾಗಿದ್ದು, ರಾಜು ನಾಪತ್ತೆ ಆಗಿರುವುದಾಗಿ ಅವರ ಸಹೋದರ ಕೆ. ಗೋಪಾಲ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ರಾಜು ಕೊನೆಯದಾಗಿ ಮಾತನಾಡಿದ್ದ ಎಲ್ಲರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ರಾಜು ಕೊಲೆಯಾಗಿರುವುದಾಗಿ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೇ ಈ ಕೊಲೆಯಲ್ಲಿ ಆತನ ಸಂಬಂಧಿಕರಾದ ಕಡವತ್ ರಾಮ್ ಸಿಂಗ್, ಕಡವತ್ ವೆಂಕಟೇಶ್, ಕಡವತ್ ಮಲ್ಲೇಶ್, ವಾಡಿತ್ಯ ಬಾಲು ನಾಯ್ಕ್, ಕಡವತ್ ಜಯಪಾಲ್, ಶಂಕರ್ ಸಹ ಶಾಮೀಲಾಗಿರುವ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ಕೊಲೆಯಾದ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇತರರ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತಿದ್ದನು ಮತ್ತು ಕೆಲವು ಆರೋಪಿಗಳ ಹೆಂಡತಿಯರೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದನು. ಹೀಗಾಗಿ ರಾಜುವಿನ ಮೇಲೆ ದ್ವೇಷ ಹೊಂದಿದ್ದ ಆತನ ಸಂಬಂಧಿಕರಾದ ರಮೇಶ್, ವಿಷ್ಣು ಮತ್ತು ಮಧು ರಾಜುರನ್ನು ಕೊಲ್ಲಲು ನಿರ್ಧರಿಸಿದರು. ಮಧು ರಾಜು ಹತ್ಯೆಗೈಯ್ಯಲು ಚಾಕುವನ್ನು ಖರೀದಿಸಿದ. ರಮೇಶ್ ಮತ್ತು ವಿಷ್ಣು ರಾಜು ಅವರನ್ನು ಭೇಟಿಯಾಗಿ ಆತನಿಗೆ ಮದ್ಯ ಕುಡಿಸಿದ್ದಾರೆ. ನಂತರ ರಾಜು ಅವರನ್ನು ಕೊಡಲಿ ಹಾಗೂ ಚಾಕುವಿನಿಂದ ಆರೋಪಿಗಳು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.