ರೋಮ್: ಇಟಲಿಯಲ್ಲಿ ಹೆಲಿಕಾಪ್ಟರ್ ಒಂದು 2 ದಿನಗಳ ಹಿಂದೆ ರಾಡಾರ್‌ನಿಂದ ಕಣ್ಮರೆಯಾಗಿತ್ತು. ಪತನವಾಗಿದ್ದ ಹೆಲಿಕಾಪ್ಟರ್‌ನಿಂದ ಇದೀಗ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಗುರುವಾರ ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದು, ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ
Advertisement
Advertisement
ಹೆಲಿಕಾಪ್ಟರ್‌ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಟರ್ಕಿ ಮೂಲದವರು ಹಾಗೂ ಇಬ್ಬರು ಲೆಬನಾನಿಯವರು ಇದ್ದು, ಒಬ್ಬ ಇಟಲಿ ಮೂಲದ ಪೈಲಟ್ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ. ಪ್ರಯಾಣಿಕರು ಇಟಲಿಗೆ ವ್ಯಾಪಾರದ ಹಿನ್ನೆಲೆ ಪ್ರಯಾಣಿಸುತ್ತಿದ್ದರು ಎಂದು ಮೊಡೆನಾ ನಗರದ ಪ್ರಿಫೆಕ್ಟ್ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್
Advertisement
ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತ್ತೆಯಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಎಲ್ಲರೂ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.