ನವದೆಹಲಿ: ಆಪರೇಷನ್ ಸಿಂಧೂರದಲ್ಲಿ (Operation Sindoor) ಭಾಗಿಯಾದ ಮಾತ್ರಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ವಿನಾಯ್ತಿ ಕೊಡಲು ಸಾಧ್ಯವಿಲ್ಲ ಎಂದು ಪತ್ನಿಯ ಕೊಲೆ ಆರೋಪಿಯಾಗಿರುವ ಬ್ಲ್ಯಾಕ್ ಕಮಾಂಡೋಗೆ (Black Cat Commando) ರಿಲೀಫ್ ಕೊಡಲು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ.
ಪ್ರಕರಣದಲ್ಲಿ ಪೊಲೀಸರ ಮುಂದೆ ಸರೆಂಡರ್ ಆಗಲು ವಿನಾಯ್ತಿ ಕೋರಿದ್ದ ಕಮಾಂಡೋ ತಾನು `ಆಪರೇಷನ್ ಸಿಂಧೂರ’ದಲ್ಲಿ ಭಾಗಿಯಾಗಿದ್ದವನು. ನಾನು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಎಂದು ಹೇಳಿದ್ದಾರೆ. ಇದಕ್ಕೆ ಕಠಿಣವಾಗಿಯೇ ಪ್ರತಿಕ್ರಿಯಿಸಿದ ಕೋರ್ಟ್, ಹಾಗಂತ ನಿಮಗೆ ವಿನಾಯ್ತಿ ಕೊಡೋಕೆ ಆಗಲ್ಲ ಅಂದಿದೆ. ಅಲ್ಲದೆ, ದೈಹಿಕವಾಗಿ ನೀವೆಷ್ಟು ಶಕ್ತರಾಗಿದ್ದೀರಿ. ನಿಮ್ಮ ಪತ್ನಿಯನ್ನು ಕತ್ತು ಹಿಸುಕಿದ್ದೀರಲ್ಲ. ಇದೊಂದು ಭೀಕರ ಕೃತ್ಯ. ಇಂಥ ಕೇಸ್ನಲ್ಲಿ ವಿನಾಯ್ತಿ ಕೊಡೋಕೆ ಆಗಲ್ಲ ಎಂದು ಜಸ್ಟೀಸ್ ಉಜ್ಜಲ್ ಭುಯಾನ್ ಹೇಳಿದರು. ಇದನ್ನೂ ಓದಿ: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್ಗೆ 1,616 ರೂ. ದರ ನಿಗದಿ
ನಿಮ್ಮ ವಿರುದ್ಧ ವರದಕ್ಷಿಣೆ ಕೇಸ್ ಕೂಡ ಇದ್ದು, ಹೈಕೋರ್ಟ್ ನಿಮಗೆ ರಿಲೀಫ್ ಕೊಟ್ಟಿಲ್ವಲ್ಲಾ ಎಂದು ಜಸ್ಟೀಸ್ ವಿನೋದ್ ಚಂದ್ರನ್ ಹೇಳಿದರು. ವಾದದ ಬಳಿಕ ಶರಣಾಗತಿಗೆ ಸುಪ್ರೀಂಕೋರ್ಟ್ 2 ವಾರಗಳ ಕಾಲಾವಕಾಶ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್
ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪ್ರಕರಣದಲ್ಲಿ ಜುಲೈ 2004ರಂದು ಅಮೃತಸರದ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಬಲ್ಜಿಂದರ್ ಸಿಂಗ್ ಅವರನ್ನು ಐಪಿಸಿ ಸೆಕ್ಷನ್ 304-ಬಿ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಇದನ್ನೂ ಓದಿ: ರೋಡ್ ರೇಜ್ ಕೇಸ್ – ಮಾಜಿ ಎಂಪಿ ಅನಂತಕುಮಾರ್ ಹೆಗಡೆ ಗನ್ಮ್ಯಾನ್, ಡ್ರೈವರ್ಗೆ ಜಾಮೀನು