ನವದೆಹಲಿ: 30 ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು (Rape) ನಂತರ ಹತ್ಯೆಗೈದ ಅಪರಾಧಿಗೆ ದೆಹಲಿ (Delhi) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ರವೀಂದರ್ ಕುಮಾರ್ ಎಂಬಾತ ಆರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದ ಬಳಿಕ ಮೇ 6ರಂದು ರೋಹಿಣಿ ನ್ಯಾಯಾಲಯವು ಆತ ಅಪರಾಧಿ ಎಂಬ ತೀರ್ಪನ್ನು ನೀಡಿತ್ತು. ಈ ಕುರಿತು ಕಳೆದ ವಾರ ತೀರ್ಪು ನಡೆಯಬೇಕಿತ್ತು. ಆದರೆ ಕುಮಾರ್ ಆದಾಯ ಮತ್ತು ಆಸ್ತಿಯ ಬಗ್ಗೆ ವಿವರ ತಿಳಿಯದ ಕಾರಣ ತೀರ್ಪನ್ನು ಮುಂದೂಡಲಾಯಿತು. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!
Advertisement
Advertisement
ಮೂಲತಃ ಉತ್ತರಪ್ರದೇಶದ ಕಾಸ್‌ಗಂಜ್‌ನ ನಿವಾಸಿಯಾದ ರವೀಂದರ್ ಕುಮಾರ್ 2008ರಲ್ಲಿ ದೆಹಲಿಗೆ ಬಂದಿದ್ದ. ಆಗ ಆತನ ವಯಸ್ಸು 18 ಆಗಿತ್ತು. ತೀವ್ರ ಮದ್ಯವ್ಯಸನಿ ಮತ್ತು ಡ್ರಗ್ಸ್ (Drugs) ಚಟ ಹೊಂದಿದ್ದ ಈತ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದಿನವಿಡೀ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅಪ್ರಾಪ್ತರು ಅರೆಸ್ಟ್
Advertisement
Advertisement
ಈತ ಡ್ರಗ್ಸ್ ಸೇವಿಸಿದ ಬಳಿಕ ಮಕ್ಕಳನ್ನು ಹುಡುಕಿಕೊಂಡು ಸುಮಾರು 40 ಕಿಲೋ ಮೀಟರ್‌ವರೆಗೂ ನಡೆದುಕೊಂಡೇ ಹೋಗುತ್ತಿದ್ದ. ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಕೊಳಗೇರಿಗಳೇ ಈತನ ಟಾರ್ಗೆಟ್. ಅಲ್ಲಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು, ಮಕ್ಕಳಿಗೆ 10 ರೂ. ಅಥವಾ ಸಿಹಿ ತಿನಿಸುಗಳ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರಗೈದು ಕೊಲೆಮಾಡುತ್ತಿದ್ದ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!
ಹೀಗೇ 2008ರಿಂದ 2015ರ ಒಳಗಾಗಿ ಒಟ್ಟು 30 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಕುರಿತು ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 2015ರಲ್ಲಿ ಈತನನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಶಿಕ್ಷೆಯ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ದೆಹಲಿ ಪೊಲೀಸರು ಈತನಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ಕೋರಿದ್ದರು. ಹೀಗಾಗಿ ಈತನಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಇದನ್ನೂ ಓದಿ: ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು