ನನ್ನರಸಿ ರಾಧೆ, ಕರಿಮಣಿ (Karimani) ಸೀರಿಯಲ್ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಅವರ ಅಂತ್ಯಕ್ರಿಯೆ ಇಂದು (ಜು.21) ಮರಾಠ ಸಂಪ್ರದಾಯದಂತೆ ನೆರವೇರಿದೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ
ನಾಗರಭಾವಿ ನಿವಾಸದಲ್ಲಿ ಆಪ್ತರಿಗೆ ಇಂಡಸ್ಟ್ರಿಯವರಿಗೆ ವಿನೋದ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು (ಜು.21) ಮಧ್ಯಾಹ್ನ ನಗರದ ಚಾಮರಾಜೇಟೆಯ ಟಿ.ಆರ್ ಮಿಲ್‌ನಲ್ಲಿ ಹಿಂದೂ ಮರಾಠ ಸಂಪ್ರದಾಯದಂತೆ ವಿನೋದ್ ಅಂತ್ಯಕ್ರಿಯೆ ಜರುಗಿದೆ.
ಅಂದಹಾಗೆ, ಸಾಲದ ಸುಳಿಯಲ್ಲಿ ಸಿಲುಕಿದ್ದ ವಿನೋದ್ ಜು.20ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕ ವಿನೋದ್ ಅವರ ಸಿನಿಮಾ ಮಾಡುವ ಕನಸು ಮಾತ್ರ ಅರ್ಧದಲ್ಲೇ ಕಮರಿ ಹೋಗಿರೋದು ದುರಂತವೇ ಸರಿ. ವಿನೋದ್ ಇನ್ನು ಕೇವಲ ನೆನಪು ಮಾತ್ರ.