ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಈ ಹಿಂದೆ ಚಂದ್ರಿಕಾ ಪಾತ್ರಧಾರಿಯಾಗಿ ರಾಜೇಶ್ವರಿ ಪಾರ್ಥಸಾರ್ಥಿ ಅವರು ಅಭಿನಯಿಸುತ್ತಿದ್ದರು. ಅವರು ಈ ಧಾರಾವಾಹಿಯಿಂದ ಹೊರಬಂದು ಕೆಲವು ವರ್ಷಗಳಾಗಿದ್ದು, ಇದೀಗ ಅವರು ಸಂಪೂರ್ಣ ಬದಲಾಗಿದ್ದಾರೆ.
ರಾಜೇಶ್ವರಿ ಅವರು ಮದುವೆಯಾದ ನಂತರ ಸೀರಿಯಲ್‍ನಿಂದ ಹೊರಬಂದು ಪತಿ ಕಲ್ಯಾಣ್ ಕ್ರಿಶ್ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಹವ್ಯಾ ಕೃಷ್ಣ ಎಂದು ನಾಮಕರಣವನ್ನೂ ಮಾಡಿದ್ದಾರೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.
ರಾಜೇಶ್ವರಿ ಅವರು ಮದುವೆಯಾದ ನಂತರ ಸಿನಿಮಾರಂಗದಿಂದ ದೂರ ಸರಿದಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೇಶ್ವರಿ ಅವರ ವೇಷ ಭೂಷಣ ಕೂಡ ಸಂಪೂರ್ಣ ಬದಲಾಗಿದೆ.
ಧಾರಾವಾಹಿಯಲ್ಲಿ ರಾಜೇಶ್ವರಿ ಅವರು ತಮ್ಮ ಉದ್ದವಾದ ಕೂದಲಿನಿಂದಲೇ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಗ ಕೂದಲನ್ನು ಕತ್ತರಿಸಿ ವಿಭಿನ್ನವಾಗಿ ಕಾಣುತ್ತಿದ್ದಾರೆ. ನಟಿ ರಾಜೇಶ್ವರಿ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನಟಿಯಾಗಿ ಅಭಿನಯಿಸುತ್ತಿದ್ದು, ಚಂದ್ರಿಕಾ ಹೆಸರಿನಲ್ಲಿ ಪ್ರೇಕ್ಷಕರ ಮನದಲ್ಲಿದ್ದರು.