ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (SEP) ರಚನಾ ಸಮಿತಿಯ ಅವಧಿಯನ್ನ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ (Dr.MC Sudhakar) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ವರೆಗೂ ಎಸ್‍ಇಪಿ ಸಮಿತಿ ಅವಧಿ ವಿಸ್ತರಣೆ ಮಾಡಲಾಗಿದೆ. ಎಸ್‍ಇಪಿ ಸಮಿತಿ ವರದಿ ವಿಸ್ತರಣೆ ಮಾಡಲಾಗಿದ್ದು, ಫೆಬ್ರವರಿವರೆಗೂ ಸಮಿತಿಗೆ ವರದಿ ಕೊಡಲು ಸಮಯ ಕೊಡಲಾಗಿತ್ತು. ಸಮಿತಿಯಿಂದ ಸಮಯ ಕೇಳಿದ ಹಿನ್ನಲೆಯಲ್ಲಿ ಆಗಸ್ಟ್ ವರೆಗೂ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಲ್ಲ: ಡಾ.ಎಂ.ಸಿ ಸುಧಾಕರ್
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಮಾಡದೇ ಹೋದರೆ ಕೇಂದ್ರದ ಅನುದಾನ ಕಡಿಮೆ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಒತ್ತಡ ಹಾಕಿ ಎನ್‍ಇಪಿ ಅನುಷ್ಠಾನ ಮಾಡಿ ಅಂತ ಹೇಳೋದು ಸರಿಯಲ್ಲ. ಈಗಾಗಲೇ ಕೇರಳ, ತಮಿಳುನಾಡು ಸರ್ಕಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡಿವೆ. ಹೀಗಿದ್ದರೂ ಆ ರಾಜ್ಯಗಳಿಗೆ ಕೇಂದ್ರ ಅನುದಾನ ಕೊಟ್ಟಿದೆ. 60:40 ಶೇರ್‌ನಲ್ಲಿ ಅನುದಾನ ಬರಬೇಕು. ಕೇಂದ್ರ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದೆ ಎಂದು ನೋಡೋಣ. ಅನುದಾನ ಬಿಡುಗಡೆ ಮಾಡದೇ ಹೋದ್ರೆ ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
SEP ಸಮಿತಿ ಮಧ್ಯಂತರ ವರದಿ ನೀಡಲು ಸಿದ್ದವಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸಮಯ ಪಡೆದುಕೊಂಡು ಮಧ್ಯಂತರ ವರದಿ ಸ್ವೀಕಾರ ಮಾಡ್ತೀವಿ. ಎಸ್‍ಇಪಿ ಸಮಿತಿ ಕೊಟ್ಟ ಬಳಿಕ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಮೊದಲು ಅನುಷ್ಠಾನ ಮಾಡ್ತೀವಿ. ಬಳಿಕ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಜಾರಿ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಬಿಜೆಪಿ, ಟಿಕೆಟ್ ಬಗ್ಗೆ ಡೌಟೇ ಇಲ್ಲ: ಸುಮಲತಾ