ಮುಂಬೈ: ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಬಹುಮತ ಬರುತ್ತದೆ ಎನ್ನುವ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಭಾರೀ ಏರಿಕೆಯಾಗಿದೆ.
ಒಂದೇ ದಿನ ಸೆನ್ಸೆಕ್ಸ್ 1,421 ಅಂಕ ಜಿಗಿದರೆ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ 421 ಅಂಕ ಜಿಗಿತ್ತು. ಅಂತಿಮವಾಗಿ ಸೆನ್ಸೆಕ್ಸ್ 39,353 ರಲ್ಲಿ ಕೊನೆಯಾದರೆ, ನಿಫ್ಟಿ 11,828 ಅಂಕಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
Advertisement
Advertisement
ಪ್ರಮುಖವಾಗಿ ಮಾರುಕಟ್ಟೆಯಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೊಟಾರ್ಸ್, ಬಿಪಿಸಿಎಲ್, ಎಚ್‍ಪಿಸಿಎಲ್, ಬಜಾಜ್ ಫೈನಾನ್ಸ್, ಯೆಸ್ ಬ್ಯಾಂಕ್ ಮೊದಲಾದವುಗಳ ಷೇರುಗಳು ಲಾಭಗಳಿಸಿವೆ.
Advertisement
ರೂಪಾಯಿ ಮೌಲ್ಯ ಹೆಚ್ಚಳ: ಸೆನ್ಸೆಕ್ಸ್ ಏರಿಕೆ ಹಿನ್ನೆಲೆಯಲ್ಲಿ ಡಾಲರ್ ಎದುರು ಭಾರತ ರೂಪಾಯಿ ಬಲ ಹೆಚ್ಚಾಗಿದ್ದು, 79 ಪೈಸೆ ಹೆಚ್ಚಾಗಿ 69.44 ರೂಗಳಿಗೆ ತಲುಪಿದೆ. ಶುಕ್ರವಾರ ಅಂತ್ಯವಾಗಿದ್ದ ವಹಿವಾಟಿನ ವೇಳೆ ಡಾಲರ್ ಎದುರು ರೂಪಾಯಿ 70.22ಗೆ ಕೊನೆಗೊಂಡಿತ್ತು.