ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆಯಾಗಿ ಇಂದಿಗೆ 3 ತಿಂಗಳಾಗಿದೆ. ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಜವಾಬ್ದಾರಿ ವಹಿಸಿದ್ದಾರೆ. ತನಿಖೆಯ ವಿಚಾರವಾಗಿ ಎಲ್ಲಿಯು ಕೂಡ ಪೊಲೀಸರು ರಾಜಿಯಾಗಿಲ್ಲ. ತನಿಖೆಗೆ ಇದ್ದ ಅವಧಿಯಲ್ಲಿ ನೂರಾರು ಸಾಕ್ಷ್ಯಗಳನ್ನ ಕಲೆಹಾಕಿ ಸಾವಿರಾರು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ
ಕಮಿನಷರ್ ದಯಾನಂದ್ ಹಾಗೂ ಡಿಸಿಪಿ ಗಿರೀಶ್ ನೇತೃತ್ವದ ತಂಡ, ರೇಣುಕಾಸ್ವಾಮಿ ಪ್ರಕರಣವನ್ನು ಯಾವ ರೀತಿ ಗಂಭೀರವಾಗಿ ತನಿಖೆ ಮಾಡಿದೆ ಎನ್ನುವುದಕ್ಕೆ ಚಾರ್ಜ್‌ಶೀಟ್ ಸಾಕ್ಷಿಯಾಗಿದೆ.
ತನಿಖಾ ಹಂತದಲ್ಲಿ ಒಂದುಚೂರು ಯಾಮಾರಿದ್ದರೂ ಪೊಲೀಸರಿಗೆ ಪ್ರಮುಖ ಸಾಕ್ಷ್ಯಗಳು ಸಿಗುತ್ತಿರಲಿಲ್ಲ. ಪೊಲೀಸ್ ಇಲಾಖೆ ಮೇಲಿದ್ದ ಅಪನಂಬಿಕೆ ಜನರಲ್ಲಿ ಹಾಗೆಯೇ ಮುಂದುವರೆಯುವಂತೆ ಮಾಡುತ್ತಿತ್ತು. ಆದರೆ, ದರ್ಶನ್ ಗ್ಯಾಂಗ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಪೊಲೀಸ್ ಹಾಗೂ ಕಾನೂನಿನ ಮೇಲೆ ಜನರಲ್ಲಿ ನಂಬಿಕೆ ಹುಟ್ಟಿಸಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ
ತಪ್ಪು ಅಂತಾ ಬಂದಾಗ ಪೊಲೀಸರು ಹಣವಂತರನ್ನು ಬಿಡೋದಿಲ್ಲ. ಯಾರನ್ನೂ ಬಿಡೋದಿಲ್ಲ ಎಂಬ ಸಂದೇಶವನ್ನು ಬೆಂಗಳೂರು ಪೊಲೀಸರು ಕೊಟ್ಟಿದ್ದಾರೆ. ‘ಡಿ’ ಗ್ಯಾಂಗ್ ಬಂಧನದ ಬಳಿಕ ಪೊಲೀಸರಿಗೆ ಸಾಕಷ್ಟು ಒತ್ತಡವಿದ್ದರೂ ಯಾರ ಮರ್ಜಿಗೆ ಬೀಳದೆ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.