ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಹಿರಿಯ ಪತ್ರಕರ್ತ (Journalist) ಅರ್ಷದ್ ಷರೀಫ್ (Arshad Sharif) ಅವರನ್ನು ಕೀನ್ಯಾದಲ್ಲಿ (Kenya) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅವರ ಪತ್ನಿ ಜುವೇರಿಯಾ ಸಿದ್ದಿಕಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದಿಕಿ, ನಾನು ಇಂದು ನನ್ನ ಸ್ನೇಹಿತ, ಪತಿ ಮತ್ತು ನನ್ನ ನೆಚ್ಚಿನ ಪತ್ರಕರ್ತನನ್ನು ಕಳೆದುಕೊಂಡಿದ್ದೇನೆ. ಕೀನ್ಯಾದಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಹೇಳಿದ್ದಾರೆ.
Advertisement
I lost friend, husband and my favourite journalist @arsched today, as per police he was shot in Kenya.
Respect our privacy and in the name of breaking pls don’t share our family pics, personal details and his last pictures from hospital.
Remember us in ur prayers. pic.twitter.com/wP1BJxqP5e
— Javeria Siddique (@javerias) October 24, 2022
Advertisement
ವರದಿಗಳ ಪ್ರಕಾರ ಈ ವರ್ಷದ ಆರಂಭದಲ್ಲಿ ಅರ್ಷದ್ ವಿರುದ್ಧ ಹಲವಾರು ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಅವರು ಪಾಕಿಸ್ತಾನವನ್ನು ತೊರೆದಿದ್ದರು. ಸ್ವಲ್ಪ ಸಮಯ ದುಬೈನಲ್ಲಿದ್ದ ಅರ್ಷದ್ ತಮ್ಮನ್ನು ಅಲ್ಲಿ ಹಲವರು ಗುರುತು ಹಿಡಿಯುತ್ತಿದ್ದಾರೆ ಎಂದು ಕೀನ್ಯಾಗೆ ತೆರಳಿದ್ದರು. ಷರೀಫ್ ಹತ್ಯೆಗೆ ಅಫ್ಘಾನಿಸ್ತಾನದ ಹಂತಕರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಭಾರತ ವಿರುದ್ಧ ಸೋಲು – ಡ್ರೆಸ್ಸಿಂಗ್ ರೂಮ್ನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು
Advertisement
ಮೊದಲಿಗೆ ಅರ್ಷದ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಅದು ಹತ್ಯೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೀನ್ಯಾದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸಂಬAಧಿಸಿದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Advertisement
ಅರ್ಷದ್ ಷರೀಫ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪತ್ರಕರ್ತ ಅರ್ಷದ್ ಷರೀಫ್ ಅವರ ಸಾವಿನ ಆಘಾತಕಾರಿ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಶೆಹಬಾಜ್ ಷರೀಫ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ