ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

Advertisements

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆರೋಪದಡಿ ಹಿರಿಯ ಮ್ಯಾನೇಜರ್ ಮತ್ತು ಎಂಬಿಎ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

Advertisements

ಮೇ 3 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಜೆನ್‍ಪ್ಯಾಕ್ಟ್‍ನ ಹಿರಿಯ ವ್ಯವಸ್ಥಾಪಕ ಲವ್ ಬಗ್ಗಾ ಎಂದು ಗುರುತಿಸಲಾಗಿದೆ. ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ತನಗೆ ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಈ ಕುರಿತಂತೆ ಟ್ವೀಟ್ ಕೂಡ ಮಾಡಿದ್ದರು. ಇದನ್ನೂ ಓದಿ: ಕತ್ತು, ಮರ್ಮಾಂಗ ಹಿಸುಕಿ ಕೊಲೆಗೈದು ದತ್ತುಮಗನ ಶವ ಚೀಲದಲ್ಲಿ ತುಂಬಿ ಕಥೆ ಕಟ್ಟಿದ್ಳು!

Advertisements

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ ನಂತರ ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲು ಪ್ರಾರಂಭಿಸಿದರು. ಮೊದಲಿಗೆ ಮೆಟ್ರೋ ನಿಲ್ದಾಣಕ್ಕೆ ವ್ಯಕ್ತಿ ಆಗಮಿಸಿದ್ದನ್ನು ಸಿಸಿಟಿವಿ ದೃಶ್ಯದಲ್ಲಿ ಗಮನಿಸಿದ ಪೊಲೀಸರು, ಬಳಿಕ ಆರೋಪಿ ಪ್ರಯಾಣಿಸಲು ಬಳಸುತ್ತಿದ್ದ ಮೆಟ್ರೋ ಕಾರ್ಡ್‍ನಿಂದ ಆತನ ವಿವರವನ್ನು ಸಂಗ್ರಹಿಸಿದ್ದಾರೆ.

ಮೂರು ತಿಂಗಳ ತನಿಖೆಯ ನಂತರ ಪ್ರಮುಖ ಆರೋಪಿಯನ್ನು 38 ವರ್ಷದ ಲುವ್ ಬಗ್ಗಾ ಎಂದು ಗುರುತಿಸಿದ ಪೊಲೀಸರು ಆತನನ್ನು ದೆಹಲಿಯ ಪಾಂಡವ್ ನಗರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ ಮತ್ತು ಪ್ರಕರಣದ ಎರಡನೇ ಆರೋಪಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ 24 ವರ್ಷದ ಶಿವ ಓಂ ಗುಪ್ತಾ ಎಂದು ಗುರುತಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

Advertisements

ತನಿಖೆಯ ವೇಳೆ ಇಬ್ಬರು ಆರೋಪಿಗಳು ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಜೆನ್‍ಪ್ಯಾಕ್ಟ್‍ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ಲವ್ ಬಗ್ಗಾ ಅವರಿಗೆ ಮದುವೆಯಾಗಿದ್ದು, ಮಗು ಕೂಡ ಇದೆ.

Live Tv

Advertisements
Exit mobile version