ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ (Senior Journalist) ಕೆ. ಸತ್ಯನಾರಾಯಣ (K Sathyanarayana) ಅವರು ಭಾನುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ ಭಾನುವಾರ ಬೆಳಗ್ಗೆ ಜಯನಗರದ ಎಲ್‍ಐಸಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಅವರು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುದೀರ್ಘ ಅವಧಿಗೆ ನಾನಾ ಹಂತದಲ್ಲಿ ದುಡಿದಿದ್ದಾರೆ. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದರು. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ
ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತ, ಸರಳವಾಗಿ ಬರೆಯುತ್ತಿದ್ದ ಅವರು ವಾಣಿಜ್ಯ, ವ್ಯವಹಾರ ವರದಿಗಾರಿಕೆಯಲ್ಲಿ ಪರಿಣಿತರಾಗಿದ್ದರು. ಬಜೆಟ್ ವರದಿಗಾರಿಕೆಯಲ್ಲಿ ಸತ್ಯನಾರಾಯಣ ಎತ್ತಿದ ಕೈ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿಯೂ ವರದಿಗಾರರಾಗಿ ಕೆಲಸ ಮಾಡಿದ್ರು. ಕನ್ನಡಪ್ರಭದಲ್ಲಿ ನಗರಪ್ರದಕ್ಷಿಣೆ, ವ್ಯಕ್ತಿ ವಿಚಾರ ಎಂಬ ಅಂಕಣ ಬರೆಯುತ್ತ ಜನಮನ ಗೆದ್ದಿದ್ದರು.
ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸವಿದ್ದ ಅವರು ಆದರ್ಶ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನಲ್ಲೂ ವೆಂಕಮ್ಮ, ಸತ್ಯನಾರಾಯಣ ದಂಪತಿ ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನು ಸತ್ಯನಾರಾಯಣ ಅವರು ಬೆಳೆಸಿದ್ದರು. ಸತ್ಯನಾರಾಯಣ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪತ್ನಿ ವೆಂಕಮ್ಮ, ಮಗಳು ಅಪೂರ್ವರನ್ನು ಅಗಲಿದ್ದಾರೆ. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k