ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ (Pratap Reddy) ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಏ.30 ರಂದು ಸೇವೆಯಿಂದ ನಿವೃತ್ತಿಗೆ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಪತ್ರ ಬರೆದಿದ್ದರು. ಅವರ ಸ್ವಯಂ ನಿವೃತ್ತಿ ಪತ್ರವನ್ನು ಸರ್ಕಾರ ಅಂಗೀಕರಿಸಿದೆ. ಏ.30 ಕ್ಕೆ ಇಲಾಖೆಯಿಂದ ಬಿಡುಗಡೆಗೆ ಆದೇಶಿಸಿದೆ. ಇದನ್ನೂ ಓದಿ: ಇಡಿ, ಐಟಿಯನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ
ಪ್ರತಾಪ್ ರೆಡ್ಡಿ ಅವರು ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತಿಗೂ 2 ತಿಂಗಳ ಮುಂಚೆಯೇ ಇಲಾಖೆಯಿಂದ ಬಿಡುಗಡೆ ಮಾಡುವಂತೆ ಕೋರಿ ಪತ್ರ ಬರೆದಿದ್ದರು.