ಮುಂಬೈ: ದೀಪಾವಳಿ ಹಬ್ಬದಂದೇ ಮನೆಗೆ ಬೆಂಕಿ ಹತ್ತಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಗ್ರ್ಯಾಂಟ್ ರೋಡ್‍ನ ನಿರ್ಮಲಾ ನಿವಾಸದ ನರ್ಗಿಸ್ ಕಂಗ (65) ಮೃತ ದುರ್ದೈವಿ. ಏಳು ಮಹಡಿಯ ಕಟ್ಟಡದಲ್ಲಿ ಮೂರನೇ ಅಂತಸ್ತಿನಲ್ಲಿ ವೃದ್ಧೆ ವಾಸವಾಗಿದ್ದರು. ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಓದಿ: 3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!
Advertisement
ಆಗಿದ್ದೇನು?:
ನರ್ಗಿಸ್ ಕಂಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಬುಧವಾರ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಿಡಿ ತಗುಲಿ, ಮನೆಯಲ್ಲಿದ್ದ ಪುಸ್ತಕ, ಕಟ್ಟಿಗೆಯ ಪೀಠೋಪಕರಣಕ್ಕೆ ಬೆಂಕಿ ಹೊತ್ತಿಕೊಂಡು ಭಾರೀ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಿತ್ತು. ಅದನ್ನು ಗಮನಿಸಿದ ಕಟ್ಟಡದ ನಿವಾಸಿಯೊಬ್ಬರು, ಮನೆಯ ಬಾಗಿಲು ಮುರಿದು, ವೃದ್ಧೆಯನ್ನು ರಕ್ಷಿಸಿದ್ದಾರೆ. ಆದರೆ ವೃದ್ಧೆಯ ದೇಹವು ಸಂಪೂರ್ಣವಾಗಿ ಸುಟ್ಟು, ಸಾವು ಬದುಕಿನ ಮಧ್ಯದಲ್ಲಿ ಹೋರಾಡುತ್ತಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Advertisement
ಕಟ್ಟಡದಲ್ಲಿ ಬುಧವಾರ ಬೆಳಗ್ಗೆ 4 ಗಂಟೆಗೆ ಕಾಣಿಸಿಕೊಂಡ ಬೆಂಕಿ 9 ಗಂಟೆವರೆಗೆ ಹೊತ್ತಿ ಉರಿದಿದೆ. ಇದರಿಂದಾಗಿ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ನಿರ್ಮಲಾ ನಿವಾಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv