ಉಡುಪಿ: ನಟ ಅರ್ಜುನ್ ಸರ್ಜಾ ಸರಳ ಸಜ್ಜನಿಕೆಯ ವ್ಯಕ್ತಿ ಅಂತ ನಟಿ, ಮಹಿಳಾ ಮತ್ತು ಕಲ್ಯಾಣ ಖಾತೆಯ ಸಚಿವೆ ಡಾ. ಜಯಮಾಲಾ ಪ್ರಮಾಣಪತ್ರ ಕೊಟ್ಟಿದ್ದಾರೆ.
ಬೈಂದೂರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಮಾಧ್ಯಮಗಳ ಜೊತೆ ಮೀಟೂ ಅಭಿಯಾನ ಬಗ್ಗೆ ಮಾತನಾಡಿದರು. ಮೀಟೂ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ. ಹೆಣ್ಣೊಬ್ಬಳು ಮುಕ್ತವಾಗಿ ಸಮಸ್ಯೆ ಹೇಳಿಕೊಂಡು ಬಂದಾಗ ನಾವು ಬೆಂಬಲ ನೀಡಬೇಕು. ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು ಎಂದರು.
Advertisement
Advertisement
ಹೆಣ್ಣಿನ ಚಿತ್ರಹಿಂಸೆಗೆ ದೌರ್ಜನ್ಯಕ್ಕೆ ಮೀಟೂ ಬಲ ತಂದುಕೊಟ್ಟಿದೆ. ಡಾ. ರಾಜ್ ಕುಮಾರ್ ಕಾಲದಲ್ಲಿ ನಾವು ಬೆಳೆದವರು. ನಮ್ಮ ಕಾಲ ಚಿತ್ರರಂಗ ಸುವರ್ಣ ಯುಗವಾಗಿತ್ತು. ಇಂತಹ ಸಮಸ್ಯೆಯ ದಿನಗಳನ್ನೇ ನಾನು ನೋಡಿಲ್ಲ. 46 ವರ್ಷದಲ್ಲಿ 75 ಸಿನೆಮಾ ಮಾಡಿದ್ದೇನೆ. ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ. ಈಗಿನ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ. ನಟ ಅರ್ಜುನ್ ಸರ್ಜಾ ಸರಳ ಸಜ್ಜನ ಹುಡುಗ, ಸರ್ಜಾ ತಂದೆಯ ಜೊತೆಯೂ ಅಭಿನಯಿಸಿದ್ದೆ ಎಂದು ನೆನಪು ಮಾಡಿಕೊಂಡರು.
Advertisement
ಶೃತಿ ಹರಿಹರನ್ ಆರೋಪ ಮತ್ತು ನಂತರದ ಬೆಳವಣಿಗೆ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಕ್ಕೆ ಬರಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಸಭೆ ಕರೆದಿದ್ದಾರೆ. ಯಾವ ಹೆಣ್ಣಿಗೂ ಸಮಸ್ಯೆ ಆಗಬಾರದು. ಯಾವ ಪುರುಷನಿಗೂ ಅನ್ಯಾಯ ಆಗಬಾರದು. ವಿಶಾಖ ಜಡ್ಜ್‌ಮೆಂಟ್ ವಿಂಗ್ ಎಲ್ಲಾ ಕಡೆ ತೆರೆಯಬೇಕು. ಎಲ್ಲಾ ಕಚೇರಿ, ಸಂಸ್ಥೆಯಲ್ಲಿ ವಿಶಾಖ ಶಾಖೆ ತೆರೆಯುವಂತಾಗಲಿ ಎಂದರು.
Advertisement
ಚಿತ್ರರಂಗವನ್ನು ಮೀಟೂ ಇಬ್ಭಾಗ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್ ವುಡ್ ಗೆ 85 ವರ್ಷಗಳ ಇತಿಹಾಸ ಇದೆ. ಎಲ್ಲಾ ಸಮಸ್ಯೆ ಮಾತುಕತೆಯಲ್ಲಿ ಬಗೆಹರಿಯುತ್ತದೆ ಎಂದು ಆಶವಾದ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv