ಬಾಗಲಕೋಟೆ: ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಂಸತ್ ಭವನದ ಆಕರ್ಷಣಾ ಕೆಂದ್ರಬಿಂದುವಾಗಿರುವ ಸೆಂಗೊಲ್ (Sengol) ಪ್ರತಿಷ್ಠಾಪನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಸೆಂಗೊಲ್ ರಾಜದಂಡದ ನಂಟು ಬಾಗಲಕೋಟೆ (Bagalkote) ಜಿಲ್ಲೆಗೂ ವ್ಯಾಪಿಸಿದೆ. ಐತಿಹಾಸಿಕ ತಾಣವಾದ ಬಾಗಲಕೋಟೆಯಲ್ಲಿ ಸೆಂಗೊಲ್ ಪ್ರತಿರೂಪ ಕಲಾಕೃತಿಯಲ್ಲಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಾದಾಮಿ (Badami) ತಾಲೂಕಿನ ಪಟ್ಟದಕಲ್ಲು (Pattadakal) ಗ್ರಾಮದ ವಿರೂಪಾಕ್ಷ ದೇವಾಲಯದ (Virupaksha Temple) ಬಲ ಗೋಡೆಯ ಮೇಲೆ ಸೆಂಗೋಲ್ ಪ್ರತಿರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ದೇವಾಲಯದ ಗೋಡೆಯ ಮೇಲೆ ಕಲಾವಿದನಿಂದ ಕೆತ್ತಲ್ಪಟ್ಟ ಕಲಾಕೃತಿ ಸೆಂಗೊಲ್‌ಗೆ ಸಾಮ್ಯತೆ ಹೊಂದಿದೆ. ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೊಲ್ ಕಾಣಿಸುತ್ತಿದೆ. ಸೆಂಗೊಲ್ ಮೇಲೆ ನಂದಿಯ ಕೆತ್ತನೆಯಾಗಿದೆ. ಅಜ್ಞಾನದ ಸಂಕೇತವಾಗಿರುವ ಮೂರ್ತಿಯನ್ನು ನಾಶಪಡಿಸಿ, ದುಷ್ಟಶಕ್ತಿಯನ್ನು ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯ ಕಲಾಕೃತಿ ಕೆತ್ತನೆಯಾಗಿದೆ. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್
- Advertisement
ಚಾಲುಕ್ಯರ ಲೋಕಮಹಾದೇವಿ ಕಟ್ಟಿಸಿದ ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದ್ದು, ಈ ಒಂದು ರಾಜಮುದ್ರೆ ಸೆಂಗೊಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯ ಕಂಚಿ ಪಲ್ಲವರ ಮೇಲೆ ಯುದ್ಧಸಾರಿ ಜಯ ಸಾಧಿಸಿದ ನೆನಪಿಗಾಗಿ ಕಟ್ಟಿಸಲ್ಪಟ್ಟಿರುವ ವಿರೂಪಾಕ್ಷ ದೇವಾಲಯದ ಗೋಡೆಯ ಮೇಲೆ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?
- Advertisement