ನವದೆಹಲಿ: ಹೊಸ ಸಂಸತ್ ಭವನ ಉದ್ಘಾಟನೆ ವಿವಾದದ ಜೊತೆಗೆ ಈಗ ರಾಜದಂಡ `ಸೆಂಗೋಲ್ʼ (Sengol) ವಿವಾದವೂ ಸೇರ್ಪಡೆಯಾಗಿದೆ. ಕಳೆದ 7 ದಶಕಗಳಿಂದ ಅಲಹಾಬಾದ್ ಮ್ಯೂಸಿಯಂನಲ್ಲಿದ್ದ (Allahabad Museum) ಚಿನ್ನದ ರಾಜದಂಡವನ್ನು ಸಂಸತ್‌ಭವನ ಉದ್ಘಾಟನೆ ವೇಳೆಯೇ ಸ್ಪೀಕರ್ ಆಸನದ ಬಳಿ ಸ್ಥಾಪಿಸಲಾಗ್ತಿದೆ.
Advertisement
1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದಾಗ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಲಾರ್ಡ್ ಮೌಂಟ್ ಬ್ಯಾಟನ್ ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಈ ಚಿನ್ನದ ರಾಜದಂಡ ಕೊಟ್ಟಿದ್ದರು. ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ರಾಜದಂಡವನ್ನು ಸ್ವೀಕರಿಸುವಂತೆ ನೆಹರು ಅವರಿಗೆ ಸಲಹೆ ನೀಡಿದ್ದರು. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?
Advertisement
Advertisement
ಇದನ್ನು, 1950ರಲ್ಲಿ ಅಲಹಾಬಾದ್ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ಆದ್ರೆ ಲಾರ್ಡ್ ಮೌಂಟ್ ಬ್ಯಾಟನ್ – ರಾಜಗೋಪಾಲಾಚಾರಿ-ನೆಹರೂ ಅವರಿಗೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ಈ ರಾಜದಂಡವನ್ನು ಕೊಡಲಾಗಿತ್ತು ಅನ್ನೋದೇ ಬೋಗಸ್. ಯಾವುದೇ ಸಾಕ್ಷ್ಯ ಇಲ್ಲ ಅಂತಾ ಕಾಂಗ್ರೆಸ್‌ನ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವರು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತಕ್ಕೆ 9 ವರ್ಷ, ಕಾಂಗ್ರೆಸ್‌ನಿಂದ 9 ಪ್ರಶ್ನೆ – ಮೌನ ಮುರಿದು ಉತ್ತರಿಸುವಂತೆ ಒತ್ತಾಯ
Advertisement
ಗೃಹ ಸಚಿವ ಅಮಿತ್ ಶಾ (Amit Shah) ಟ್ವೀಟ್ ಮಾಡಿ, ಇದು ಸಂಸ್ಕೃತಿ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿದೆ. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿ (Narendra Modi) ಅವರಿಗೆ ಗೊತ್ತಾಗುತ್ತಿದ್ದಂತೆ ಅದನ್ನು ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾರೆ. ಸೆಂಗೋಲ್ ಎಂದರೆ ತಮಿಳಿನ ಭಾಷೆಯಲ್ಲಿ `ಸಮೃದ್ಧ, ಸಂಪತ್ತು’ ಎಂದರ್ಥ ಎಂದು ಅಮಿತ್ ಶಾ ಹೇಳಿದ್ದಾರೆ. ಸ್ವಾತಂತ್ರ್ಯದ ಸಂಕೇತವಾದ ಈ ರಾಜದಂಡವನ್ನು ನೆಹರು ಅವರ ಊರುಗೋಲು ಅಂತಾ ಕತ್ತಲೆಯಲ್ಲಿ ಇಡಲಾಗಿತ್ತು ಎಂದು ಸ್ಮೃತಿ ಇರಾನಿ ಕೂಡ ವಾಗ್ದಾಳಿ ನಡೆಸಿದ್ದಾರೆ.