ಬೆಂಗಳೂರು: ಭಾರತೀಯ ಸೇನೆಯ ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ನಾಯಕರಿಗೆ (Congress Leaders) ಸಿದ್ದರಾಮಯ್ಯ (Siddaramaiah) ಪಾಕಿಸ್ತಾನ ಪ್ರವಾಸ ಭಾಗ್ಯ ಕರುಣಿಸಲಿ. ಕಾಂಗ್ರೆಸ್ ನಾಯಕರು ಪಾಕಿಸ್ತಾನಕ್ಕೆ ಹೋಗಿ ಸಾಕ್ಷಿ ಸಂಗ್ರಹ ಮಾಡಿಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹೇಳಿಕೆಗಳಿಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ (Pakistan) ವಿರುದ್ಧ ನಮ್ಮ ಸೈನಿಕರು ಹೋರಾಟ ಮಾಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಮಲ್ಲಿಕಾರ್ಜುನ ಖರ್ಗೆ ನಾವು ಬೆಂಬಲ ಕೊಡುತ್ತೇವೆ ಅಂದರು. ಸರ್ಕಾರದ ಎಲ್ಲಾ ನಿರ್ಧಾರಕ್ಕೆ ಸಹಕಾರ ಕೊಡುತ್ತೇವೆ ಅಂದರು. ಈಗ ಬೇರೆ ಬೇರೆ ರಾಜ್ಯದಲ್ಲಿ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೇರೆ ಬೇರೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದು ಹೈಕಮಾಂಡ್ ಸೂಚನೆಯಾ ಎಂದು ಕಾಂಗ್ರೆಸ್ ಹೈಕಮಾಂಡ್ ತಿಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂದಿನಿಂದ 5 ದಿನ 3 ಗಂಟೆಗಳ ಕಾಲ ಹೆಬ್ಬಾಳ ಫ್ಲೈಓವರ್ ಬಂದ್
ಪಾಕಿಸ್ತಾನದ ಒಳಗೆ, ಹೊರಗೆ ನಮ್ಮ ಸೇನೆ ಭಯೋತ್ಪಾದಕರನ್ನ, ತರಬೇತಿ ಕೇಂದ್ರಗಳನ್ನು ಹೊಡೆದಿದ್ದಾರೆ. ಅವರ ಕುಟುಂಬಕ್ಕೆ ಪಾಕಿಸ್ತಾನ ಸರ್ಕಾರ ಹಣ ಕೊಟ್ಟಿದೆ. ಈಗ ಅದಕ್ಕೆ ಸಾಕ್ಷಿ ಏನು ಅಂತ ಕಾಂಗ್ರೆಸ್ ಕೇಳುತ್ತಿದೆ. ನಮ್ಮ ಸೈನಿಕರನ್ನು ಅವಮಾನಿಸುತ್ತಿದೆ. ಹಿಂದೆ ಸರ್ಜಿಕಲ್ ಸ್ಟ್ರೈಕ್‌ಗೂ ಸಾಕ್ಷಿ ಕೇಳಿದ್ದರು. ಈಗ ಆಪರೇಷನ್ ಸಿಂಧೂರಕ್ಕೂ ಸಾಕ್ಷಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬೇಕು. ಇಲ್ಲದೇ ಹೋದರೆ ಅವರ ನಾಯಕರಿಗೆ ಪಾಕಿಸ್ತಾನ ಪ್ರವಾಸ ಭಾಗ್ಯ ಕೊಡಿ. ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ. ಅನುಭವ ಪಡೆದು ಬರಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಪ್ರಮುಖ ರೈಲುಗಳ ಸಂಚಾರ ರದ್ದು – ಸುಬ್ರಹ್ಮಣ್ಯ, ಮಂಗಳೂರು, ಕಾರವಾರಕ್ಕೆ ಸಂಚಾರದಲ್ಲಿ ವ್ಯತ್ಯಯ
ಜಮೀರ್ ನಾನೇ ಬಾಂಬ್ ಹಾಕ್ತೀನಿ ಅಂದರು. ಬಾಂಬ್ ಹಾಕೋದು ಬೇಡ. ಅವರು ಪಾಕಿಸ್ತಾನ ಪ್ರವಾಸ ಮಾಡಿ ಬರಲಿ. ನಿಮ್ಮ ನಾಯಕ ರಾಹುಲ್ ಗಾಂಧಿ ಭಾರತದ ವಿರುದ್ಧ ಮಾತನಾಡುತ್ತಾರೆ. ಚುನಾವಣೆ ಬಂದಾಗ ಚುನಾವಣೆ ಮಾಡೋಣ. ದೇಶದ ಯುದ್ಧದ ವಾತಾವರಣದಲ್ಲಿ ರಾಜಕೀಯ ಮಾಡುತ್ತೀರಾ? ನಿಮಗೆ ನಮ್ಮ ಹೆಣ್ಣುಮಕ್ಕಳ ಧಿಕ್ಕಾರ ಇದೆ. ಸಾವಿನಲ್ಲಿ, ಹೋರಾಟದಲ್ಲಿ ರಾಜಕೀಯ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಕಪ್ಪು ಪಟ್ಟಿ ತೋರಿಸಬೇಕಾಗಿದೆ ಎಂದು ಗುಡುಗಿದರು. ಇದನ್ನೂ ಓದಿ: Mysuru | ಸಿಲಿಂಡರ್ ಬದಲಾಯಿಸುವಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ – ಐವರಿಗೆ ಗಾಯ
ತಿರಂಗಾ ಯಾತ್ರೆ ಜನ ಮಾಡುತ್ತಿದ್ದಾರೆ. ಬಿಜೆಪಿ ಯಾತ್ರೆ ಮಾಡುತ್ತಿಲ್ಲ. ಜನರೇ ಬಂದು ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್ ಆಯ್ಕೆಮಾಡಿದ ಕೇಂದ್ರ!