ಮುಂಬೈ: ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್‍ಗಳ ಮೂಲಕವೇ, ಆನ್‍ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್‍ಲೈನ್ ಟಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಅನುಮೋದನೆ ನೀಡಿದೆ.
ಈಗಿರುವ ಯುಪಿಐ, ಆರ್‌ಟಿಜಿಸಿ, ನೆಫ್ಟ್ ಸೇರಿದಂತೆ ಇನ್ನಿತರೆ ಮಾರ್ಗಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೊಬೈಲ್ ಬಳಸಿ ಆನ್‍ಲೈನ್ ಮೂಲಕ ಹಣವರ್ಗಾವಣೆ ಮಾಡಲು ಇಂಟರ್ನೆಟ್ ಸಂಪರ್ಕ ಅವಶ್ಯಕವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಇಲ್ಲದ ಕಾರಣ, ಆ ಭಾಗದ ಜನತೆ ಡಿಜಿಟಲ್ ಪಾವತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮೀಣ ಜನರನ್ನೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಈ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು
- Advertisement
- Advertisement
ಇಂಟರ್ನೆಟ್ ಬೇಕಿಲ್ಲ: ಈ ಯೋಜನೆಯಡಿ ಅಗ್ಗದ ಮೊಬೈಲ್ ಅಂದರೆ ಫೀಚರ್ ಫೋನ್, ಕಾರ್ಡ್, ವ್ಯಾಲೆಟ್ ಬಳಸಿ ಒಂದು ಬಾರಿಗೆ ಗರಿಷ್ಟ 200 ರೂಪಾಯಿನಂತೆ ಒಂದು ದಿನಕ್ಕೆ ಗರಿಷ್ಟ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹದು. ಎಸ್‍ಎಂಎಸ್, ಕ್ಯು ಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ ಮಾಡಬಹದು. ಹೆಚ್ಚುವರಿ ಖಾತ್ರಿಯ ಅವಶ್ಯಕತೆಯೂ ಇರುವುದಿಲ್ಲ.